ಮೈಸೂರು: ಮೈಸೂರಿನ ಕುವೆಂಪು ನಗರದ
ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಮತ್ತು ಕರುಣೆ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೈಬರಹ ಮತ್ತು ಓದುವ ಸ್ಪರ್ಧೆಯಲ್ಲಿ ಬಹಳಷ್ಟು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
ಮಕಳಿಗಾಗಿಯೇ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದರು, ಮತ್ತು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ತೊಡಗಿಸಿಕೊಂಡರು. ಸ್ಪರ್ಧೆಯನ್ನು ಮೂರು ವರ್ಗಗಳಲ್ಲಿ ಆಯೋಜಿಸಲಾಯಿತು:
ಎ ವರ್ಗ: 1ರಿಂದ 3ನೇ ತರಗತಿ
ಬಿ ವರ್ಗ: 4ರಿಂದ 7ನೇ ತರಗತಿ
ಸಿ ವರ್ಗ: 8ರಿಂದ 10ನೇ ತರಗತಿಯವರೆಗೆ
ಸ್ಪರ್ಧೆಯಲ್ಲಿ ಮಕ್ಕಳ ಕಲಿಕಾಶಕ್ತಿಗೆ ಉತ್ತೇಜನ ನೀಡುವ ಜತೆಗೆ ಅವರ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರುಣೆ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ರುಕ್ಮಿಣಿ ಅವರು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣಪತ್ರಗಳನ್ನು ನೀಡಲಾಯಿತು, ಪ್ರತಿ ವರ್ಗದಿಂದ ಮೂರು ಶ್ರೇಷ್ಠ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಈ ರೀತಿಯ ಕಾರ್ಯಕ್ರಮಗಳು ಮಕ್ಕಳಿಗೆ ಆತ್ಮವಿಶ್ವಾಸ ಹಾಗೂ ಭಾಷಾ ಕೌಶಲ್ಯಗಳ ಅಭಿವೃದ್ದಿಗೆ ಸಹಾಯಕವಾಗಿವೆ ಎಂದು ಆಯೋಜಕರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅಥರ್ವ ಸ್ಕಿಲ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪ,
ಜೆಸಿಐ ಸದಸ್ಯರಾದ ಸುಮಿತ್ರ,
ಕೈ ಬರಹ ಶಿಕ್ಷಕಿ ಮೇನಕಾ,
ಸಮಾಜ ಸೇವಕಿ ರೇಖಾ ಮತ್ತಿತರರು ಹಾಜರಿದ್ದರು.