ಡಾ.ಅಂಬೇಡ್ಕರ್ ಪುತ್ಥಳಿ, ಮಂಟಪ ನಿರ್ಮಾಣ:ನಿ. ಪೊಲೀಸ್ ಮಹಾ ನಿರ್ದೇಶಕರ ಭೇಟಿ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದಲ್ಲಿ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಗ್ರಾಮಸ್ಥರು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪುತ್ಥಳಿ ಹಾಗೂ ಮಂಟಪ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಮರಿಸ್ವಾಮಿ ಅವರು ಭೇಟಿ ನೀಡಿ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು ಗ್ರಾಮಸ್ಥರು ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿ ಮಂಟಪ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ಮಂಟಪ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಹೇಳಿದರು.

ಈ ಮಂಟಪದಲ್ಲಿ ಅಂಬೇಡ್ಕರ್ ರವರ ಪುತ್ತಳಿ ಪ್ರತಿಷ್ಠಾಪನೆ ಮಾಡಿದರೆ ಸೊಗಸಾಗಿ ಕಾಣಲಿದೆ ಈ ಮಹತ್ಕಾರ್ಯಕ್ಕೆ ನನ್ನ ಕಡೆಯಿಂದ ಆಗಬಹುದಾದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಮರಿಸ್ವಾಮಿ ಅವರನ್ನು ಆತ್ಮೀಯವಾಗಿ ಹಾರ ಹಾಕಿ ಶಾಲು ಹೊದಿಸಿ ಸ್ವಾಗತಿಸಿ ಬರಮಾಡಿ ಕೊಂಡರು.

ಪುತ್ಥಳಿ ನಿರ್ಮಾಣದ ನೇತೃತ್ವ ವಹಿಸಿರುವ ತಾಪಂ ಮಾಜಿ ಉಪಾಧ್ಯಕ್ಷ ಬಿ ಬಸವಣ್ಣ, ಮುಖಂಡ ರಾಜಶೇಖರ್ ಮೂರ್ತಿ, ಗ್ರಾಮದ ಯಜಮಾನರುಗಳಾದ ಲಿಂಗರಾಜು, ಆರ್. ಜಗದೀಶ್, ಎಸ್. ರಮೇಶ್, ಡಿ. ಸಿದ್ದರಾಜು, ಗ್ರಾಫಂ ಮಾಜಿ ಅಧ್ಯಕ್ಷ ಮಹಾದೇವಯ್ಯ ಮಾಜಿ ಸದಸ್ಯ ಮುತ್ತುರಾಜು ಗ್ರಾಮಸ್ಥರಾದ ಪುಟ್ಟಸ್ವಾಮಿ ನಟರಾಜು ಮತ್ತಿತರರು ಹಾಜರಿದ್ದರು.