ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಮಹಿಳೆಯರ ಬದುಕಿಗೆ ದಾರಿ:ರಾಜೀವ್

Spread the love

ಮೈಸೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಹಿಳೆಯರು ಸಾಲ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದು,ಅದು‌ ಅವರ‌ ಬದುಕಿಗೆ ದಾರಿಯಾಗಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಹೇಳಿದ್ದಾರೆ.

ಈ ಯೋಜನೆ ಶೇ.16 ರ ಬಡ್ಡಿದರದಲ್ಲಿ ಸಾಲವನ್ನು ಒದಗಿಸುತ್ತಿದ್ದು, ಇದು ಮಿತಿಯಲ್ಲಿಯೇ ಇದೆ. ಪ್ರಮುಖವಾಗಿ, ಯಾವುದೇ ಜಾಮೀನು ಇಲ್ಲದೆ ಸಾಲ ನೀಡುವ ಈ ಯೋಜನೆ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ದಾರಿ ತೆರೆದಿದೆ. ಇಂತಹ ಯೋಜನೆಗಳು ಜನತೆಯ ಬದುಕು ಸುಧಾರಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದ್ದಾರೆ.

ಅದರೆ ಖಾಸಗಿ ಮೈಕ್ರೊಫೈನಾನ್ಸ್ ಸಂಸ್ಥೆಗಳ ದಂಡಮಾರ್ಗದ ಹಣವಸೂಲಿ ಮತ್ತು ಹೆಚ್ಚಿನ ಬಡ್ಡಿ ದರಗಳು ಜನರ ಮೇಲೆ ಬೃಹತ್ ಆರ್ಥಿಕ ಒತ್ತಡವನ್ನು ತಂದಿವೆ ಎಂದು ರಾಜೀವ್ ಹೇಳುದ್ದಾರೆ.

ಇವು ಬಡ ಜನರ ಬದುಕನ್ನು ಕಷ್ಟಕರವಾಗಿಸುತ್ತಿವೆ, ಸರ್ಕಾರ ಕೂಡಲೇ ಇವುಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆದ ಎಚ್ ವಿ ರಾಜೀವ್ ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಯೋಜನೆಯಂತಹ ಉತ್ತಮ ಉದ್ದೇಶಗಳುಳ್ಳ ಸಂಸ್ಥೆಗಳು ಸಮಾಜದಲ್ಲಿ ನಂಬಿಕೆ ಮತ್ತು ನೆರವನ್ನು ಒದಗಿಸುತ್ತಿರುವುದರಿಂದ ಇವುಗಳಿಗೆ ಪ್ರೋತ್ಸಾಹ ನೀಡಲು ನಾವೆಲ್ಲರೂ ಮುಂದಾಗಬೇಕು ಎಂದು ಹೆಚ್ ವಿ ರಾಜೀವ್
ಮನವಿ ಮಾಡಿದ್ದಾರೆ.