ಮೈಸೂರು: ರಾಮಾನುಜ ಅಬ್ಯುದಯ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಚ್ ಕೆ ರಾಜಗೋಪಾಲ್ ಅವರನ್ನು ಶಾಸಕ ಟಿ ಎಸ್ ಶ್ರೀವತ್ಸ ಅವರು ಅಭಿನಂದಿಸಿದರು.
ಸರಸ್ವತಿಪುರಂನಲ್ಲಿರುವ
ರಾಮಾನುಜ ಅಬ್ಯುದಯ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್. ಕೆ ರಾಜಗೋಪಾಲ್ ಆಯ್ಕೆಯಾಗಿದ್ದಾರೆ.
ಹಾಗಾಗಿ ಟಿ ಎಸ್ ಶ್ರೀವತ್ಸ ಅವರು ಶಾಲು ಹೊದಿಸಿ ಅವರನ್ನು ಅಭಿನಂದಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್,ಸಂಸ್ಕೃತಿ ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ದೀಕ್ಷಿತ್, ಹೇಮಂತ್, ರಾಜೇಶ್ ಜಾದವ್, ಗಿರೀಶ್ ಗೌಡ, ಕಿಶೋರ್ , ಮಧುಸೂದನ್ ಮತ್ತಿತರರು ಶುಭ ಕೋರಿದರು.