ಜೋಕಾಲಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಬಿಗಿದು ಬಾಲಕ ಸಾ*ವು

Spread the love

ಮೈಸೂರು: ಮಕ್ಕಳು ಯಾವುದೇ ಆಟ ಆಡುತ್ತಿದ್ದರೂ ಅವರ ಕಡೆ ಪೋಷಕರು ನಿಗಾ ಇಟ್ಟಿರಬೇಕು ಇಲ್ಲದಿದ್ದರೆ‌ ಅನಾಹುತ ತಪ್ಪಿದ್ದಲ್ಲ.ಇದಕ್ಕೆ ಜಿಲ್ಲೆಯ ಹೆಚ್ ಡಿ ಕೋಟೆಯಲ್ಲೊಂದು ಮನಮಿಡಿಯುವ ಘಟನೆ ಸಾಕ್ಷಿಯಾಗಿದೆ.

ಬಾಲಕ ಶನಿವಾರ ಶಾಲೆ ಮುಗಿಸಿ ಮನೆಗೆ ಬಂದು ಆಟವಾಡುತ್ತಿದ್ದ.ಅದೇ ವೇಳೆ ಸೀರೆಕಟ್ಟಿ ಜೋಕಾಲಿ ಆಟ ಆಡಲು ಮುಂದಾಗಿದ್ದಾನೆ.ಈ‌ ವೇಳೆ ಸೀರೆ ಕುತ್ತಿಗೆಗೆ ಬಿಗಿದು ಬಾಲಕ ಮೃತಪಟ್ಟಿದ್ದಾನೆ.

ಎಚ್.ಡಿ.ಕೋಟೆ ತಾ.ಹೊಮ್ಮರಗಳ್ಳಿ ಜಿ ಹೆಚ್ ಪಿ ಎಸ್ ಶಾಲೆಯ 7 ನೆ ತರಗತಿ ವಿದ್ಯಾರ್ಥಿ ಗುರು ಮೃತಪಟ್ಟ ನತದೃಷ್ಟ ಬಾಲಕ.

ಇದನ್ನು ಕಂಡ ಬಾಲಕನ ಪೋಷಕರ ದುಖಃದ ಕಟ್ಟೆ ಒಡೆದಿತ್ತು.ಅಕ್ಕಪಕ್ಕದ ಮನೆಯವರೆಲ್ಲ ಧಾವಿಸಿ ಮಮ್ಮಲ ಮರುಗಿದರು.