ಹೆಚ್ ಡಿ ಕೋಟೆ ತಾಲೂಕು ಆಡಳಿತ ಸೌಧದಲ್ಲಿ ಕೊಳಕು ನೀರಿನ ರಾಡಿ!

Spread the love

ಹೆಚ್ ಡಿ ಕೋಟೆ: ಹೆಚ್ ಡಿ ಕೋಟೆ ತಾಲೂಕು ಆಡಳಿತ ಸೌಧದಲ್ಲಿ ಬಹಳಷ್ಟು ಕೆಲಸ ಕಾರ್ಯಗಳು ಸದಾ ಇದ್ದೇ ಇರುತ್ತದೆ,ಸುತ್ತಮುತ್ತಲ ಗ್ರಾಮಗಳ ಜನರು,ರೈತರು ಹೀಗೆ ಯಾರಾದರೂ ಬರುತ್ತಲೇ ಇರುತ್ತಾರೆ.

ಆದರೆ ಈ ತಾಲೂಕು ಸೌಧ ಹೊರಗಿಂದ ನೋಡಲು ಚೆನ್ನಾಗಿಯೇ ಇದೆ.ಮೇಲೆ ತಳುಕು ಒಳಗೆ ಹುಳುಕು ಎಂಬ ಗಾದೆ ಮಾತಿನಂತೆ ಆಗಿದೆ ಈ ಭವನ.

ಈ ಸೌಧದಲ್ಲಿ ಸರ್ಕಾರಿ ಕಾರ್ಯಕ್ರಮಗಳು ಸಭೆಗಳು ನಡೆಯುತ್ತದೆ.ಈ‌ ಭವನದ ಹಾಲ್ ನಲ್ಲಿ ಅಚ್ಚುಕಟ್ಟಾಗಿ ಕುರ್ಚಿಗಳನ್ನು ಜೋಡಿಸಲಾಗಿದೆ, ವೇದಿಕೆಯೂ ಸಿದ್ದವಿರುತ್ತದೆ.

ಇದೆಲ್ಲಾ ಸರಿಯಾದುದೇ,ಒಳ್ಳೆಯದು ಕೂಡಾ,ಆದರೆ ಇಲ್ಲಿ ಕುಳಿತುಕೊಳ್ಳುವವರು ಮಾತ್ರ ಮೂಗು ಮುಚ್ಚಿಕೊಂಡಿರ ಬೇಕಾಗುತ್ತದೆ.

ಏಕೆಂದರೆ ಈ ಆಡಳಿತ‌ ಸೌಧದ ಕೊಳಕು ನೀರು ಅಂದರೆ ಶೌಚಾಲಯಗಳ ನೀರು ಹರಿದು ಬರುವ ಪೈಪ್ ಒಡೆದು ಇದೇ ಹಾಲ್ ನಲ್ಲಿ ಸೇರಿ ರಾಡಿಯಾಗುತ್ತಿದೆ.

ಈ ಸಮಸ್ಯೆ ಈಗಿನದೇನಲ್ಲ,ಹಲವು ತಿಂಗಳು ಕಳೆದಿವೆ,ಕೊಳಕು ನೀರು ಹರಿಯುತ್ತಲೇ ಇದೇ.ಆದರೂ ಇದೇ ಹಾಲ್ ನಲ್ಲಿ ಸಭೆ,ಕಾರ್ಯಕ್ರಮಗಳು ನಡೆಯುತ್ತವೆ.ಈ ಗಲೀಜಿನಲ್ಲೇ ಅತಿಥಿಗಳು ,ಸದಸ್ಯರು ಕಳಿತುಕೊಳ್ಳಬೇಕು.ಆದರೂ ಈ ಗಲೀಜಿನ ಬಗ್ಗೆ ಇವರ ಗಮನ ಹರಿದಿಲ್ಲವೆ?.

ಇನ್ನಾ ತಲೂಕು ಕಚೇರಿಯ ಹಿರಿಯ ಅಧಿಕಾರಿಗಳು,ಜನಪ್ರತಿನಿಧಿಗಳು,ತಹಸೀಲ್ದಾರ್ ಅವರಿಗೆ ಇದರ ಬಗ್ಗೆ ಗೊತ್ತಿಲ್ಲವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈ ಬಗ್ಗೆ‌ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಮನ ಸೆಳೆದಿದ್ದು ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ಈ ವಿಷಯ ತಿಳಿಸಿದ್ದಾರೆ.

ಇನ್ನಾದರೂ ಈ ಸೌಧದ ಶೌಚಾಲಯದ ನೀರು ಹರಿಯುವ ಪೈಪ್ ಸರಿಪಡಿಸಿ ಇಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.