ಮೈಸೂರು: ದತ್ತಾತ್ರೇಯ ಅಂದರೆ ಬ್ರಹ್ಮ ವಿಷ್ಣು ಮಹೇಶ್ವರರ ಅವತಾರ, ಅವರನ್ನೆಲ್ಲ ನಾವು ಗುರುವಿನಲ್ಲಿ ಕಾಣುತ್ತೇವೆ ದತ್ತಾತ್ರೇಯ ಅಂದರೆ ಗುರುವಿನ ಅವತಾರ ಎಂದು ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ಹೇಳಿದರು.
ಮಂಡಿ ಮೊಹಲ್ಲಾದ ಬೆಂಕಿನವಾಬರ ಬೀದಿ ಯಲ್ಲಿರುವ ಶ್ರೀ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಸಾಯಿಬಾಬಾ ಮಂದಿರದಲ್ಲಿ
ಗುರುವಾರ ದತ್ತ ಜಯಂತಿ ಪ್ರಯುಕ್ತ ಜರುಗಿದ ದತ್ತಾತ್ರೇಯ ಪೂಜೆ, ಮಹಾರುದ್ರಾ ಭಿಷೇಕ, ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ, ತೋಮಾಲೆ ಸೇವೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ
ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದೇವಸ್ಥಾನಗಳಲ್ಲಿ ನಿತ್ಯ ನಿಯಮ, ಭಜನೆ ಧ್ಯಾನ ಉಪಾಸನೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ, ಇದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಮಾಧಾನ ಸಿಗಲಿದೆ ಎಂದು ಹೇಳಿದರು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ ವಾಸುದೇವ,
ಅರ್ಚಕರಾದ ರಾಜೇಶ್, ದೀಕ್ಷಿತ್, ರಮೇಶ್, ಸಾಗರ್, ಶರತ್ ಹಾಗೂ ಡಾಕ್ಟರ್ ಲೋಕೇಶ್ ಕುಟುಂಬ ಮತ್ತು ನೂರಾರು ಭಕ್ತರು ಹಾಜರಿದ್ದರು.
ಗುರುವಿನ ಅವತಾರ ದತ್ತಾತ್ರೇಯ:ವಿದ್ವಾನ್ ಎಸ್ ಕೃಷ್ಣಮೂರ್ತಿ