ಗುರು, ಗುರಿ ಇದ್ದರೆ ಯಶಸ್ಸು ಸಾಧ್ಯ-ಫ್ರೊ.ವನಮಾಲ ಸಿ ಕೆ

Spread the love

ಮೈಸೂರು: ಗುರು ಮತ್ತು ಗುರಿ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಮೈಸೂರಿನ ಎನ್ ಐ ಇ ಕಾಲೇಜಿನ ಪ್ರೋ.ಡಾ.ವನಮಾಲ ಸಿ.ಕೆ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶ್ರೀ ದುರ್ಗಾ ಫೌಂಡೇಶನ್ ಆಯೋಜಿಸಿದ್ದ
ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಪ್ರೊ.ವನಮಾಲ ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ನೇತಾರರು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ನೈತಿಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದು ಹೇಳಿದರು.

ಸಮಾಜ ಸೇವಕಿ ಶಾಂತಮ್ಮ ಮಾತನಾಡಿ,
ಶಿಕ್ಷಕರದ್ದು ಒಂದು ಪವಿತ್ರ ವೃತ್ತಿ ಇದರಲ್ಲಿ ಸಿಗುವ ಆತ್ಮಶಾಂತಿ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ. ಶಿಕ್ಷಕ ವೃತ್ತಿಯನ್ನು ಕೇವಲ ನೌಕರಿ ಎಂದು ಭಾವಿಸದೇ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಡಾಕ್ಟರ್ ವನಮಾಲ ಸಿ. ಕೆ,
ರಾಂಪುರ ಶ್ರೀನಾಥ್, ನಂದಿನಿ ರಾಜ್, ಜಿ ಪುಷ್ಪವತಿ ಅವರುಗಳನ್ನು ಈ ವೇಳೆ ಸನ್ಮಾನಿಸಿ ಶುಭ ಕೋರಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್, ರೂಪದರ್ಶಿ ರೇಣುಕಾ, ಶೋಭಾ, ಅಶ್ವಿನಿ ಗೌಡ,
ದಿ ಗ್ರಾಜುಯೇಟ್ಸ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ವರಲಕ್ಷ್ಮಿ ಅಜಯ್, ರಂಜಿತ, ವಿಶ್ವ ಹಿಂದೂ ಪರಿಷತ್ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ,
ಮತ್ತಿತರರು ಉಪಸ್ಥಿತರಿದ್ದರು.