ಮೈಸೂರು: ಮಹಿಳೆಯರಿಗಾಗಿ ನೀಡಿರುವ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಹಣದಲ್ಲಿ ಮೈಸೂರಿನ ನಿವಾಸಿಯೊಬ್ಬರು ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.
ಆಲನಹಳ್ಳಿ ನಿವಾಸಿ ಜ್ಯೋತಿ ಮಹದೇವ ಸ್ವಾಮಿ ಅವರ ಮನೆಯವರು ಪೂಜಾ ಸಂದೃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವ ಮೂಲಕ ಅಭಿಮಾನ ಮೆರೆದು ವಿಶೇಷವಾಗಿ ಗಮನ ಸೆಳೆದಿದ್ದಾರೆ.

ಈ ವೇಳೆ ಮಾತನಾಡಿದ ಜ್ಯೋತಿ ಅವರು, ಎರಡು ವರ್ಷದಿಂದ ನಮ್ಮ ಖಾತೆಗೆ
ಗೃಹಲಕ್ಷ್ಮಿ ಹಣವನ್ನು ಸರ್ಕಾರ ನೀಡುತ್ತಿದ್ದು ಮಧ್ಯಮ ವರ್ಗ ಹಾಗೂ ಬಡವರಿಗೆ ಈ ಹಣ ಬಹಳ ಅನುಕೂಕವಾಗುತ್ತಿದೆ,ಅದರಲ್ಲೂ ಹಬ್ಬ ಹರಿದಿನಗಳನ್ನು ಆಚರಿಸಲು ಅನುಕೂಲವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೂರು ತಿಂಗಳಿಂದ ಖಾತೆಗೆ ಗೃಹಲಕ್ಷ್ಮಿ ಹಣ ಬರದ ಕಾರಣ ಸ್ವಲ್ಪ ಸರಳವಾಗಿ ಆಚರಿಸುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬರುವ ನಿರೀಕ್ಷೆ ಇದೆ, ಇದಕ್ಕೆ ಮುಖ್ಯ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಅಭಿನಂದನೆ ಸಲ್ಲಿಸಿಸುತ್ತೇನೆ ಎಂದು ಜ್ಯೋತಿ ಮಹದೇವಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಜರಿದ್ದರು.
