ಮೈಸೂರು: ಭಾರತೀಯ ಸೇನಾ ತರಬೇತಿ ಮುಗಿಸಿ ಸೇನಾ ಸಮವಸ್ತ್ರ ಧರಿಸಿ ತವರೂರಿಗೆ ಬಂದ ಅಗ್ನಿವೀರರಿಗೆ ಮೈಸೂರಿನ ಸೈನಿಕ ಅಕಾಡೆಮಿಯಲ್ಲಿ ಹೂವಿನ ಸುರಿಮಳೆಯೊಂದಿಗೆ ಸ್ವಾಗತಿಸಲಾಯಿತು.
ರಕ್ಷಣಾ ಇಲಾಖೆಗೆ ಸೇರಲು ಬಯಸುವ ಆಕಾಂಕ್ಷಿಗಳಿಗೆ ಮೈಸೂರಿನ ಬೆಳವಾಡಿಯ ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿರುವ ಸೈನಿಕ ಅಕಾಡೆಮಿ ವತಿಯಿಂದ ಇವರೆಲ್ಲಾ
ಭಾರತೀಯ ಸೇನಾ ತರಬೇತಿ ಮುಗಿಸಿ ಸೇನೆಯ ಸಮವಸ್ತ್ರ ಧರಿಸಿ ತವರಿಗೆ ಬಂದಿದ್ದಾರೆ.
ಜೊತೆ ಜೊತೆಗೆ ಸೈನಿಕ ಅಕಾಡೆಮಿಲ್ಲಿ ತರಬೇತಿ ಪಡೆದು ಭಾರತೀಯ ವಾಯು ಸೇನೆಗೆ ಆಯ್ಕೆ ಆಗಿರುವ ಕೊಡಗಿನ ವೀರ ಮಂಜುನಾಥ್ ಟಿ ವಿ ಮತ್ತು ಕೋಲಾರದ ಕಣ್ಮಣಿ ನವೀನ ಕುಮಾರ ಅವರಿಗೂ ಗೌರವದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ ಸಿ ಎಂ ಅವರು ಮಾತನಾಡಿ, ದೇಶದ ಸೈನ್ಯ ಸಾಕಷ್ಟು ಪ್ರಬಲವಾಗಿದೆ, ದೇಶಕ್ಕಾಗಿ ಶ್ರಮಿಸುತ್ತಿರುವ ಯೋಧರಿಗೆ ಪ್ರತಿಯೊಬ್ಬ ಭಾರತೀಯರೂ ಗೌರವ ಕೊಡಬೇಕು,
ದೇಶಕ್ಕೆ ಅನ್ನ ನೀಡುವ ರೈತರಿಗೆ ಮತ್ತು ದೇಶದ ಗಡಿ ಕಾಯುವ ಯೋಧರಿಗೆ ಕೊಡುವ ಗೌರವ ಸೈನಿಕರಲ್ಲಿ ಮತ್ತಷ್ಟು ಶಕ್ತಿ ತುಂಬಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು,
ಚಾಮುಂಡೇಶ್ವರಿ ಕ್ಷೇತ್ರದ ಬಿ ಜೆ ಪಿ ಅಧ್ಯಕ್ಷ ಪೈಲ್ವಾನ್ ರವಿ, ರೇವಣ್ಣ, ಕುಮಾರ,ಸಂಸ್ಥೆಯ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರಾದ ರವಿ, ಸುನಿತಾ, ನಮ್ರತಾ, ವರ್ಷ, ಶ್ರೀಲಕ್ಷ್ಮಿ, ಚೇತನ್, ಹಿತೈಷಿಗಳಾದ ಮಾಜಿ ಸೈನಿಕ ಶಶಿಕಿರಣ್, ಹಾಲಿ ಸೈನಿಕರಾದ ಹರೀಶ್ ಮತ್ತು ಸಿಂಬದಿಗಳು ಹಾಗೂ ಭಾವಿ ಸೈನಿಕರು ಉಪಸ್ಥಿತರಿದ್ದರು.