ವೈಭವದ ಶ್ರೀ ಪಾರ್ವತಿದೇವಿಯ 10ನೇ ವಾರ್ಷಿಕೋತ್ಸವ ಸಮಾರಂಭ

Spread the love

ಮೈಸೂರು: ಮೈಸೂರಿನ ಅಗ್ರಹಾರ,
ಡಾ ಅಣ್ಣಾಜಪ್ಪನವರ ನವಗ್ರಹ, ಶ್ರೀ ಮೃತ್ಯುಂಜಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪಾರ್ವತಿದೇವಿಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ಶ್ರೀ ಪಾರ್ವತಿದೇವಿಗೆ ಪ್ರಾತಃಕಾಲ 6.30 ಕ್ಕೆ ಉದಯ ಲಗ್ನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ನಂತರ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪಾರ್ವತಿದೇವಿ ದುರ್ಗಾ ಹೋಮಗಳನ್ನು ಹಮ್ಮಿಕೊಳ್ಳಲಾಯಿತು.

ಹೋಮಗಳನ್ನು ನೆರವೇರಿಸಿದ ನಂತರ ಪೂರ್ಣಾಹುತಿ, ಕುಂಭಾಭಿಷೇಕ ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು.
ತದನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪಾರ್ವತಿ,ಮೃತ್ಯುಂಜಯೇಶ್ವರ ಹಾಗೂ ನವಗ್ರಹಗಳ ದರ್ಶನ ಪಡೆದು ಪುನೀತರಾದರು.

ಶಿವಾರ್ಚಕರಾದ ಎಸ್.ಯೋಗಾನಂದ ಮತ್ತು ಅವರ ಪುತ್ರ ಅಭಿನಂದನ್ ಹಾಗೂ ಇತರೆ ಶಿವಾರ್ಚಕರ ಸಮ್ಮುಖದಲ್ಲಿ ಎಲ್ಲಾ ಪೂಜಾ ಕಾರ್ಯಗಳು ನೆರವೇರಿದವು.

ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿವಿಧ ಹೂಗಳು,ಬೆಳ್ಳಿಯ ಕೈ,ಕಾಲುಗಳು ಹಣ್ಣುಗಳಿಂದ ಭವ್ಯವಾಗಿ ಅಲಂಕರಿಸಿದ್ದು ನೋಡಲು ಎರಡು ‌ಕಣ್ಣುಗಳು ಸಾಲದೆಂಬಂತಿತ್ತು.