ಗೌರಿ ಹಬ್ಬ: ಹಿರಿಯರಿಗೆ ಸೀರೆ, ಹಣ್ಣು ವಿತರಣೆ

Spread the love

ಮೈಸೂರು: ಕುವೆಂಪು ನಗರ ಎಂ. ಬ್ಲಾಕ್ ನಲ್ಲಿರುವ ಬೆಳಕು ವಾತ್ಸಲ್ಯ ಧಾಮದ ಹಿರಿಯರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಗೌರಿ ಹಬ್ಬದ‌ ಶುಭ ಕೋರಿ ಯೋಗ ಕ್ಷೇಮ ವಿಚಾರಿಸಲಾಯಿತು.

ಈ ವೇಳೆ ಹೊಸ ಸೀರೆ,ಹಣ್ಣು ಹಂಪಲು ವಿತರಿಸಿ ಹಿರಿಯರ ಯೋಗ ಕ್ಷೇಮ ವಿಚಾರಿಸಿ ಗೌರಿ ಗಣೇಶ ಹಬ್ಬದ ಶುಭ ಕೋರಿ ನಂತರ ಸ್ನೇಹ ಬಳಗದ ಎಲ್ಲಾ ಸದಸ್ಯರು ಹಿರಿಯರ ಆಶೀರ್ವಾದ ಪಡೆದುಕೊಂಡರು.

ಈ ವೇಳೆ ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್,ವೀರಭದ್ರ ಸ್ವಾಮಿ, ಮಹೇಶ್, ರಾಜೇಶ್ ಕುಮಾರ್, ಮಹದೇವಸ್ವಾಮಿ,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ನಿರೀಕ್ಷಿತ್, ದತ್ತ ಮತ್ತಿತರರು ಹಾಜರಿದ್ದರು.