ಮೈಸೂರು: ಮೈಸೂರಿನ ಯುವಕರೇ ನಿರ್ಮಿತ್ತಿರುವ ಗೌರಿ ಅಲಿಯಾಸ್ ಗೌರಿಶಂಕರ್ ಚಿತ್ರದ ಧ್ವನಿಮುದ್ರಣ ಕಾರ್ಯಕ್ಕೆ ಇಂದು ಅಧಿಕೃತವಾಗಿ ಚಾಲನೆ ದೊರೆತಿದೆ.
ಈ ಚಿತ್ರವನ್ನು ಮೈಸೂರಿನಲ್ಲಿಯೇ ಬೆಳೆದ ಪ್ರತಿಭಾವಂತ ಯುವ ನಿರ್ದೇಶಕ ಮಹೇಶ್ ಸಿಂಧುವಳ್ಳಿ ನಿರ್ದೇಶಿಸುತ್ತಿದ್ದಾರೆ, ಸಂಕಲನ ಕಾರ್ಯವನ್ನು ಸುರೇಶ್ ಡಿ. ಹೆಚ್. ನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣವನ್ನು ಸದಾಶಿವ ಹಿರೇಮಠ್ ಹಾಗೂ ಸಂಗೀತ ಸಂಯೋಜನೆಯನ್ನು ಅಭಿನಂದನ್ ಕಶ್ಯಪ್ ಕೈಗೆತ್ತಿಕೊಂಡಿದ್ದಾರೆ.

ಮೈಸೂರಿನ ಉದಯೋನ್ಮುಖ ಕಲಾವಿದರು ಶಶಿ ಗೌಡ, ಅನೂಷಾ, ರಿಯಲ್ ಕೆಂಚ, ವಿಜಯ್ ಕಾರ್ತಿಕ್, ಸುಪ್ರೀತ್, ರಂಜನ್ ಎಸ್. ನಾಯಕ್, ರವಿಕುಮಾರ್ ಎಂ.ಬಿ., ಧನುಷ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಗೌರಿ ಅಲಿಯಾಸ್ ಗೌರಿಶಂಕರ್” ಚಿತ್ರವು ಮೈಸೂರಿನ ಯುವಶಕ್ತಿಯ ಸೃಜನಾತ್ಮಕತೆಯ ಪ್ರತೀಕವಾಗಿದೆ. ಸ್ಥಳೀಯ ಚಿತ್ರರಂಗದಲ್ಲಿ ಹೊಸ ಬಿಂದುಗಳನ್ನು ಚಿತ್ರಿಸುತ್ತಿದೆ.
ಗೌರಿ ಅಲಿಯಾಸ್ ಗೌರೀಶಂಕರ ಸಂಪೂರ್ಣ ವಾಗಿ ಸ್ಥಳೀಯ ಪ್ರತಿಭೆಯಿಂದ ನಿರ್ಮಾಣವಾಗುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿದೆ ಎಂಬ ನಂಬಿಕೆಯನ್ನು ಚಿತ್ರತಂಡ ಇಟ್ಟು ಕೊಂಡಿದೆ.ಶುಭವಾಗಲಿ ಎಂದು ಹಲವಾರು ಮಂದಿ ಹಾರೈಸಿದ್ದಾರೆ.