ಮೈಸೂರು: ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆ ವತಿಯಿಂದ ಮೈಸೂರಿನ ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯ ಭೋಜನಾಲಯಕ್ಕೆ ಮಕ್ಕಳ ಊಟಕ್ಕೆ ಅನುಕೂಲವಾಗುವಂತೆ ತಡೆಗೋಡೆ ನಿರ್ಮಿಸಿಕೊಡುವ ಮೂಲಕ ಮಾದರಿ ಕೆಲಸ ಮಾಡಲಾಗಿದೆ.
ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಧ್ಯಾಹ್ನದ ಭೋಜನಕ್ಕೆ ಭೋಜನಾಲಯ ಇದೆ, ಆದರೆ ನಾಲ್ಕು ಕಡೆ ತಡೆಗೋಡೆ ಇಲ್ಲದೆ ಜೋರಾಗಿ ಗಾಳಿ ಬೀಸಿದಾಗ ಧೂಳು ಊಟ ಮಾಡುವ ತಟ್ಟೆಗೆ ಬೀಳುತ್ತಿತ್ತು.

ಶಾಲೆಯ ಮುಖ್ಯ ಶಿಕ್ಷಕರು ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಲಯನ್ ಟಿ.ಹೆಚ್. ವೆಂಕಟೇಶ್ ಅವರಿಗೆ ಈ ಬಗ್ಗೆ ಮನವಿ ಮಾಡಿ ಭೋಜನವಲಯದ ನಾಲ್ಕು ಕಡೆ ಯಾವುದಾದರೂ ರೀತಿಯಲ್ಲಿ ತಡೆಗೋಡೆಯನ್ನು ನಿರ್ಮಿಸಿ ಕೊಡಬೇಕೆಂದು ಮನವಿ ಸಲ್ಲಿಸಿದ್ದರು
ಅವರ ಮನವಿಗೆ ಸ್ಪಂದಿಸಿದ ಲಯನ್ ಟಿ.ಹೆಚ್. ವೆಂಕಟೇಶ್ ಅವರು 35000 ರೂ ವೆಚ್ಚದಲ್ಲಿ ಪಾಲಿ ಕಾರ್ಬೋನೇಟ್ ಶೀಟ್ ಗಳನ್ನು ಅಳವಡಿಸಿಕೊಡಲಾಯಿತು.
ಇದರಿಂದ ಶಾಲೆಯ ವಿದ್ಯಾರ್ಥಿಗಳು ಸುವ್ಯವಿಸ್ಥಿತವಾಗಿ ಊಟ ಮಾಡಲು ಸಹಕಾರಿಯಾಗಿದೆ.
ಇದಕ್ಕಾಗಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಪಿ.ವಿ.ಸಂಗೀತಾ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎಂದು ಲಯನ್ಸ್ ಜಿಲ್ಲಾಧ್ಯಕ್ಷ ಲಯನ್ ಸಿ.ಆರ್ ದಿನೇಶ್ ತಿಳಿಸಿದ್ದಾರೆ.