ಮೈಸೂರು, ಆ.22: ಮೈಸೂರಿಗೆ ಆಗಮಿಸಿದ ಮೇಘಾಲಯದ ರಾಜ್ಯಪಾಲರಾದ ಸಿ. ಎಚ್ ವಿಜಯಶಂಕರ್ ಅವರನ್ನು ವಿವಿಧ ಸಂಘಟನೆಯ ಮುಖಂಡರು ಅಭಿನಂದಿಸಿದರು.
ಹಾಲುಮತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಹಾಗೂ ಈಶ್ವರ್, ವಿವನ್, ಕಡಕೋಳ ಮಹೇಶ್, ಮುಸಲ್ಮಾನ ಮುಖಂಡರಾದ ಕಲೀಮ್, ಶರೀಫ್, 55ನೇ ವಾರ್ಡಿನ ಯುವ ಮುಖಂಡರಾದ ಶಶಿ ರಾಜ್ ಎಂ ಎನ್ ಮತ್ತಿತರರು ಸಿ.ಹೆಚ್. ವಿಜಯಶಂಕರ್ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿ ಶುಭ ಕೋರಿದರು.