ಹುಣಸೂರು: ಹುಣಸೂರು ತಾಲೂಕು ಗೊಮ್ಮಟಗಿರಿಯಲ್ಲಿ ಮೂರು ದಿನಗಳಿಂದ ನಡೆದ ಭಗವಾನ್ ಬಾಹುಬಲಿ ಗೊಮ್ಮಟೇಶ್ವರ ಸ್ವಾಮಿಯ 75 ನೆ ಮಹಾಮಸ್ತಕಾಭಿಷೇಕ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು

ಕ್ಷೀರ, ಗಂಧ ಕಷಾಯ ,ಎಳನೀರು, ರಕ್ತ ಚಂದನ, ಇತ್ಯಾದಿ ಮಂಗಳ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ವೈಭವಪೇತವಾಗಿ ಜರುಗಿತು.

ಕನಕಗಿರಿಯ ಶ್ರೀ ಭುವನ ಕೀರ್ತಿ ಸ್ವಾಮೀಜಿ ಹಾಗೂ ಹೊಂಬುಜದ ಶ್ರೀ ದೇವೇಂದ್ರ ಕೀರ್ತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.
ಸಮಾರೋಪ ಸಮಾರಂಭದಲ್ಲಿ ಈ ಸಮಾರಂಭ ಯಶಸ್ವಿಗೆ ಕಾರಣರಾದ ಎಲ್ಲಾ ಧಾನಿಗಳನ್ನು ,ಕಾರ್ಯಕರ್ತರನ್ನ ಸಮಾಜದ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಮವಸರಣ ನಿರ್ಮಾಣದ ಭೂಮಿ ಪೂಜೆಯನ್ನು ಗೊಮ್ಮಟಗಿರಿ ಸಮಿತಿ ಅಧ್ಯಕ್ಷ ಶ್ರೀ ಮನ್ಮತ್ ರಾಜ್ ಅವರು ನೆರವೇರಿಸಿದರು.
ಮೈಸೂರು ಮಂಡ್ಯ ಚಾಮರಾಜನಗರ ಬೆಂಗಳೂರು ಹಾಸನ ತುಮಕೂರು ಎಲ್ಲಾ ಭಾಗಗಳಿಂದ ಜೈನರು ಮತ್ತು ಜೈನೇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಮೂರು ದಿನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಭೋಜನ ಮತ್ತು ಫಲಹಾರದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಮಾಡಿದ್ದು ವಿಶೇಷವಾಗಿತ್ತು.