ಮುಂಬೈ: ಹೆಣ್ಣುಮಕ್ಕಳ ಅತಿ ನೆಚ್ಚಿನ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರಿಗೆ ಕೈಗೆಟುಕದಂತಾಗಿದೆ.
ಮುಂಬೈನ ಸ್ಪಾಟ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ10 ಗ್ರಾಂಗೆ 90,500 ರಿಂದ ರೂ. 90,800 ರೂಪಾಯಿಗಳವರೆಗೂ ವಹಿವಾಟಾಗುತ್ತಿದೆ.
ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ ಪ್ರತಿ ಔನ್ಸ್‌ಗೆ $3,000 ದಾಟಿದ ಅಂತರರಾಷ್ಟ್ರೀಯ ಚಿನ್ನದ ಬೆಲೆಗಳು ದೇಶೀಯ ಬೇಡಿಕೆಯ ಮೇಲೆ ಪರಿಣಾಮ ಬೀರಿವೆ.
ಮದುವೆ ಸೀಸನ್ ಪ್ರಾರಂಭವಾಗಿದೆ,ಇತ್ತ ಚಿನ್ನದ ಬೆಲೆ ಏರುತ್ತಲೇ ಇದೆ, ಪ್ರಸ್ತುತ ಹೆಚ್ಚಿನ ಬೆಲೆಗಳಲ್ಲಿ, ಪರಿಮಾಣದ ದೃಷ್ಟಿಯಿಂದ ಚಿನ್ನದ ಅತಿದೊಡ್ಡ ಖರೀದಿದಾರ ಸಮುದಾಯವಾಗಿರುವ ಕಡಿಮೆ ಮತ್ತು ಮಧ್ಯಮ-ಆದಾಯದ ಜನರಿಗೆ, ಚಿನ್ನ ಕೈಗೆಟುಕುತ್ತಿಲ್ಲ
ಐಐಎಂ ಅಹಮದಾಬಾದ್‌ನ ಇಂಡಿಯನ್ ಗೋಲ್ಡ್ ಪಾಲಿಸಿ ಸೆಂಟರ್ 2022 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶ್ರೀಮಂತರು ಮಾತ್ರ ಚಿನ್ನವನ್ನು ಖರೀದಿಸುತ್ತಾರೆ ಎಂಬ ಸಾಮಾನ್ಯ ಗ್ರಹಿಕೆಗೆ ವ್ಯತಿರಿಕ್ತವಾಗಿ, ಶೇಕಡಾ 56 ರಷ್ಟು ಚಿನ್ನವನ್ನು ವಾರ್ಷಿಕವಾಗಿ 2 ಲಕ್ಷದಿಂದ ರೂ. 10 ಲಕ್ಷದವರೆಗೆ ಗಳಿಸುವ ಜನರೂ ಕೂಡಾ ಖರೀದಿಸಿದ್ದಾರೆ.
2022 ರಿಂದ, ಚಿನ್ನದ ಬೆಲೆ ದ್ವಿಗುಣಗೊಂಡಿದೆ, ಆದರೆ ಈ ವರ್ಗದ ಖರೀದಿದಾರರ ಉಳಿತಾಯವು ದ್ವಿಗುಣಗೊಂಡಿಲ್ಲ, ಹೆಚ್ಚಿನ ಚಿನ್ನವನ್ನು ಖರೀದಿಸುವ ಅವರ ಸಾಮರ್ಥ್ಯವನ್ನು ಚಿನ್ನದ ದರ ಏರಿಕೆ ಕಡಿಮೆ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಾರೆ ಬಡ ಜನತೆ ಮಕ್ಕಳ ವಿವಾಹ ಮತ್ತಿತರ ಹಬ್ಬ-ಹರಿದಿನಗಳಿಗೆ ಚಿನ್ನ ಖರೀದಿಸುವುದನ್ನೆ ಮರೆಯಬೇಕಿದೆ.