ಚಿನ್ನದ ಬಣ್ಣದ ಅಲಂಕಾರದಲ್ಲಿ ಕಂಗೊಳಿಸಿದ ಪಾರ್ವತಿದೇವಿ

Spread the love

ಮೈಸೂರು: ನವರಾತ್ರಿ ಹಬ್ಬದ ನಾಲ್ಕನೆ ದಿನ ಭಾನುವಾರ ಪಾರ್ವತಿ ಅಮ್ಮನವರು ಚಿನ್ನದ ಬಣ್ಣದ ಅಲಂಕಾರದಲ್ಲಿ ಕಂಗಳಿಸುತ್ತಿದ್ದಳು.

ಮೈಸೂರಿನ ಅಗ್ರಹಾರ ರಸ್ತೆಯಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ದೇವಿಗೆ‌ ಸಂಪೂರ್ಣ ಚಿನ್ನದ ಬಣ್ಣ ಮತ್ತು ನೆಕ್ಕಿಗಳಿಂದ ಅಲಂಕರಿಸಿ ವಿವಿಧ ಹೂಗಳು ಮತ್ತು ಹಣ್ಣುಗಳಿಂದ ಶೃಂಗಾರ ಮಾಡಲಾಗಿತ್ತು.

ತಾಯಿ ಪಾರ್ವತಿಯು ತ್ರಿಶೂಲ ಧಾರಿಯಾಗಿ ಬೆಳ್ಳಿ ವಸ್ತುಗಳನ್ನು ಧರಿಸಿ ಜನರಿಗೆ ಅಭಯಹಸ್ತ ನೀಡುತ್ತಾ ಶಾಂತ ಮುದ್ರೆಯಲ್ಲಿ ಕುಳಿತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ವಿಶೇಷ ಅಲಂಕಾರ‌ ಮಾಡಿದ್ದು,ಯೋಗಾನಂದ ಅವರು ಪೂಜಾ ಕಾರ್ಯ ನೆರವೇರಿಸಿದರು.