ಹುಣಸೂರು: ಹುಣಸೂರಿನ ಗೋಕುಲ ಬಡಾವಣೆ ಮತ್ತು ಮಾರುತಿ ಬಡಾವಣೆಯ ನಾಗರಿಕರೆಲ್ಲ ಸೇರಿ ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ವಿಜೃಂಭಣೆಯಿಂದ ವಿಸರ್ಜನೆ ಮಾಡಿದ್ದಾರೆ.
ಯಾವುದೇ ಜಾತಿ, ಧರ್ಮ, ಕುಲ ಬೇಧವಿಲ್ಲದೆ ಗಣಪತಿಯನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜೆಯನ್ನು ನೆರವೇರಿಸಿ ನಂತರ ಗಣಪತಿ ಮೂರ್ತಿಯನ್ನು ಊರಿನ ಅತಿ ದೊಡ್ಡದಾದ ಕೆಂಚನ ಕೆರೆಯಲ್ಲಿ ಹಗಲು ಹೊತ್ತಿನಲ್ಲೇ ಸಾಂಪ್ರದಾಯಿಕವಾಗಿ ವಿಸರ್ಜಿಸಿದ್ದು ವಿಶೇಷವಾಗಿತ್ತು.
ಈ ಕೆರೆಯ ಸುತ್ತಮುತ್ತ ಹಳ್ಳಕೊಳ್ಳ ಯಾವುದು ಇಲ್ಲ, ಬಹಳ ವಿಶಾಲವಾಗಿದ್ದು ಹಗಲು ಹೊತ್ತಿನಲ್ಲಿ ವಿಸರ್ಜಿಸುವುದರಿಂದ ಬಹಳ ಅನುಕೂಲವಾಗಿದೆ ಎಂದು ಊರಿನ ಹಿರಿಯರಾದ ತಿಮ್ಮೇಗೌಡರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದರು.
ಯಾವುದೇ ಪೊಲೀಸರಿಂದಾಗಲಿ ಅಥವಾ ಅಧಿಕಾರಿಗಳಿಂದಾಗಲಿ ನಮಗೆ ಯಾವುದೇ ಕಿರಿಕಿರಿ ಆಗಲಿಲ್ಲ ಪೊಲೀಸರ ಸಮ್ಮುಖದಲ್ಲಿ ನಾವು ಸಂಭ್ರಮದಿಂದ ಗಣಪತಿಯನ್ನು ವಿಸರ್ಜಿಸಿದ್ದೇವೆ ಎಂದು ತಿಳಿಸಿದರು.
ಗ್ರಾಮಗಳ ಮುಖಂಡರಾದ ಗೋಪಾಲ್, ತಿಪ್ಪೇಗೌಡ್ರು, ಚಂದ್ರನಾಯಕ್, ಶಿವಕುಮಾರ್ ,ರುದ್ರಪ್ಪ,ಕುಮಾರ್,ಹಿರಿಯರಾದ ಕೆಂಪೇಗೌಡರು,ಮಂಜುನಾಥ್,ಸುರೆಶ್ ನಾಯಕ್,ಚಂದ್ರ ನಾಯಕ್, ಪಾಪಣ್ಣ ಆಚಾರ್,ಸರೋಜಮ್ಮ,ಗಿರಿ,ಮಂಜು,ಬಾಬಣ್ಣ,ಪರಮೇಶ್ ಅವರುಗಳ ನೆರವಿನಲ್ಲಿ ನೆಮ್ಮದಿಯಿಂದ ಸಂಭ್ರಮದಿಂದ ಗಣಪತಿ ವಿಸರ್ಜಿಸಲಾಯಿತು.
ಗಣಪತಿ ವಿಸರ್ಜನೆ ವೇಳೆ ಮಹಿಳೆಯರು,ಮಕ್ಕಳು,ಹಿರಿಯ ನಾಗರೀಕರು ಸೇರಿದಂತೆ ಎಲ್ಲಾ ಜನಾಂಗದವರು ಖುಷಿಯಿಂದ ಭಾಗವಹಿಸಿದ್ದರು.
ಇದೆ ವೇಳೆ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು, ಹುಣಸೂರಿನ ಕೆಂಚನಕೆರೆ ಅತ್ಯಂತ ವಿಶಾಲವಾಗಿದ್ದು ಹುಣಸೂರು ಸುತ್ತಮುತ್ತಲ ಗ್ರಾಮಗಳ ಜೀವನಾಡಿಯಾಗಿದೆ ಎಂದು ತಿಳಿಸಿದರು.
ಈ ಕೆಂಚನಕೆರೆಯನ್ನು ಇನ್ನಷ್ಟು ವಿಶಾಲವಾಗಿ ಮಾಡಿ ಕೆರೆಯ ಸುತ್ತ ಪಾರ್ಕ್ ನಿರ್ಮಾಣ ಮಾಡಿ ಹಿರಿಯ ನಾಗರಿಕರು ಮಕ್ಕಳು ವಾಕಿಂಗ್ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ತಾಲೂಕು ಆಡಳಿತವನ್ನು ಅವರು ಒತ್ತಾಯಿಸಿದರು.
ಕೆರೆಯ ಹೋಳನ್ನು ತೆಗೆದರೆ ಕೆರೆ ಇನ್ನಷ್ಟು ವಿಶಾಲವಾಗುತ್ತದೆ ಎಂದು ಹೇಳಿದರು.
ಈ ಕೆಂಚನ ಕೆರೆ ಸುತ್ತಮುತ್ತ ಚಲನ ಚಿತ್ರಗಳ ಮತ್ತು ಧಾರವಾಹಿಗಳ ಶೂಟಿಂಗ್ ಗಳು ನಡೆಯುತ್ತವೆ. ತಾಲೂಕು ಅಡಿತ ಅಥವಾ ನಗರ ಸಭೆಯವರು ಹೀಗೆ ಚಿತ್ರೀಕರಣ ಮಾಡುವವರಿಂದ ಇಂತಿಷ್ಟು ಶುಲ್ಕ ವಿಧಿಸಿದರೆ ಅದನ್ನು ಕೆರೆಯ ಅಭಿವೃದ್ಧಿಗೆ ಉಪಯೋಗಿಸಬಹುದು ಎಂದು ಚೆಲುವರಾಜು ಸಲಹೆ ನೀಡಿದ್ದಾರೆ.