ಮೈಸೂರು: ಮಗಳನ್ನ ಪ್ರೀತಿಸುತ್ತಿದ್ದ ಯುವಕನನ್ನು ತಂದೆ ಹಾಗೂ ಸಂಭಂಧಿಕರು ಸಾರ್ವಜನಿಕ ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಟರ್ ಟ್ಯಾಂಕ್ ಬಳಿ ಈ ಘಟನೆ ನಡೆದಿದ್ದು,ಪ್ರಿಯತಮೆಯ ತಂದೆ ಹಾಗೂ ಇಬ್ಬರು ಸಂಭಂಧಿಕರು ಸೇರಿದಂತೆ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ್(24) ಹಲ್ಲೆಗೆ ಒಳಗಾದ ಯುವಕ. ಪ್ರಿಯತಮೆಯ ತಂದೆ ಕುಮಾರ್ ಹಾಗೂ ಅಕ್ಕನ ಮಕ್ಕಳಾದ ಮೋಹನ್ ಮತ್ತು ಅಭಿ ವಿರುದ್ದ ಪ್ರಕರಣ ದಾಖಲಾಗಿದೆ.
ಹೆಚ್.ಡಿ ಕೋಟೆಯ ಸೋನಳ್ಳಿ ಗ್ರಾಮದ ಕುಮಾರ್ ಎಂಬವರ ಮಗಳನ್ನ ಅಶೋಕ್ ಪ್ರೀತಿಸುತ್ತಿದ್ದಾರೆ.ಈ ವಿಚಾರದಲ್ಲಿ ತಂದೆ ಕುಮಾರ್ ವಿರೋಧಿಸಿದ್ದಾರೆ.
ಸಂಬಂಧಿಕರೇ ಆಗಿದ್ದರೂ ಈ ಪ್ರೀತಿಯನ್ನು ವಿರೋದಿಸಿದ್ದರು. ವಿಜಯನಗರ ವಾಟರ್ ಟ್ಯಾಂಕ್ ಬಳಿ ನಿಂತಿದ್ದ ಅಶೋಕ್ ರನ್ನ ಅಡ್ಡಗಟ್ಟಿದ ಕುಮಾರ್,ಮೋಹನ್,ಅಭಿ ಅವಾಚ್ಯ ಶಬ್ದಗಳಿಂದ ನಿಂದಿಸಿ,ಪ್ರೀತಿ ಮಾಡಲು ನನ್ನ ಮಗಳೇ ಬೇಕಾ ನಿಂಗೆ,ನನ್ನ ಮಗಳನ್ನ ಪ್ರೀತಿಸಲು ಎಷ್ಟು ಧೈರ್ಯ ಎಂದು ಕಿರುಚಾಡು, ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ.
ಅಶೋಕ್ ಚಿಕಿತ್ಸೆ ಪಡೆದು ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.