ಬಾಲಕಿ ಅತ್ಯಾಚಾರ ಕೊಲೆ: ಹೇಮಾ ನಂದೀಶ್ ಖಂಡನೆ

Spread the love

ಮೈಸೂರು: ಕಲಬುರಗಿ ಮೂಲದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ತೀವ್ರವಾಗಿ ಖಂಡಿಸಿದ್ದಾರೆ.

ಹೊಟ್ಟೆ ಪಾಡಿಗಾಗಿ ಮೈಸೂರು ದಸರಾ ಹಬ್ಬದ ವೇಳೆ ಬಲೂನು ಮಾರಲು ಬಾಲಕಿ ತಂದೆ,ತಾಯಿಯೊಂದಿಗೆ ಬಂದಿದ್ದಾಗ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಕೊಲೆಗೈದು ಚರಂಡಿಯಲ್ಲಿ ಎಸೆದಿರುವುದು ಅಕ್ಷಮ್ಯ.

ರಾಜ್ಯದಲ್ಲಿ ನಿತ್ಯ ಒಂದಿಲ್ಲೊಂದು ಅತ್ಯಾಚಾರ, ಕೊಲೆ ಪ್ರಕರಣಗಳು ವರದಿಯಾಗುತ್ತಲೇ ಇವೆ.ಕಾಮುಕರ, ಕ್ರೌರ್ಯಕ್ಕೆ ಕಡಿವಾಣವಿಲ್ಲ, ಅತ್ಯಾಚಾರಿ, ಕೊಲೆಗಡುಕರಿಗೆ ಯಾವುದೇ ಕಾನೂನಿನ ಭಯ ಇಲ್ಲದಂತಾಗಿದೆ. ಆ ಕಾಮುಕನಿಗೆ ಬಂಧಿಸಿದರೆ ಸಾಲದು. ಪೋಕ್ಸೊ ಕಾಯ್ದೆ ಅಡಿ ಕಠಿಣ ಶಿಕ್ಷೆ ಕೊಟ್ಟು ಆ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.

ದೇಶದ ಬಾಲಕಿಯರಿಗೆ, ಮಹಿಳೆಯರಿಗೆ ಎಲ್ಲಿಯೂ ಸಹ ರಕ್ಷಣೆ ಇಲ್ಲದಂತಾಗಿದೆ. ಇದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಮಹಿಳಾ ಕುಲಕ್ಕೆ ರಕ್ಷಕವಚ ಸಿಗುವದಾದರೂ ಯಾವಾಗ ಎಂದು ರೇಖಾ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.