(ವರದಿ:ನಾಗರಾಜು)
ಮೈಸೂರು: ಮೈಸೂರು ಜಿಲ್ಲೆಯ ಗೆಜ್ಜಗಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಗ್ಗಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಸುಗ್ಗಿ ಹಬ್ಬವನ್ನು ಭಾರತ ದೇಶದಾದ್ಯಂತ ಅನೇಕ ಹೆಸರಲ್ಲಿ ಆಚರಿಸಲಾಗುತ್ತದೆ ಹಾಗೆಯೇ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಯಂದು ಆಚರಿಸುವ ಈ ಹಬ್ಬವು ವರ್ಷದ ಮೊದಲ ಹಬ್ಬವಾಗಿದೆ.
ರೈತರು ತಾವು ಬೆಳೆದ ಬೆಳೆಗಳನ್ನು ಒಂದೆಡೆ ಹರವಿ ಸುತ್ತಲೂ ಬಳಸುವ ಸುಗ್ಗಿ ಸಲಕರಣೆಗಳನ್ನು ಇಟ್ಟು ಪೂಜೆ ಮಾಡುತ್ತಾರೆ.
ಅದೇ ರೀತಿಯಲ್ಲೇ ಈ ಶಾಲೆಯಲ್ಲಿ ಮಕ್ಕಳು ದವಸ,ಧನ್ಯಗಳನ್ನು ರಾಶಿ ಮಾಡಿ ಪೂಜಿಸಿದರು.

ಎಲ್ಲರಿಗೂ ಸಮೃದ್ಧ ಫಸಲನ್ನು ನೀಡಿ,ಹಸಿವನ್ನು ನೀಗಿಸಲು ನೆರವಾಗುವ ದೇವತೆಗಳಿಗೆ ಕೃತಜ್ಞತೆಯನ್ನು ಸೂಚಿಸುವ ಹಬ್ಬವಾಗಿ ಆಚರಿಸಲಾಗುತ್ತದೆ.ಅದರಂತೆ ವದ್ಯಾರ್ಥಿನಿಯರು ಒಲೆ ಸಿದ್ದಪಡಿಸಿ ಅದಕ್ಕೆ ಪೂಜೆ ಮಾಡಿ ಸಿಹಿ ತಯಾರಿಸಿ
ಕೃತಜ್ಞತೆ ಸಲ್ಲಿಸಿದರು.

ಹೆಣ್ಣು – ಗಂಡು ಮಕ್ಕಳು ಸಾಂಪ್ರದಾಯಿಕ ಉಡುಪು ಧರಿಸಿ ಈ ಹಬ್ಬದಲ್ಲಿ ಪಾಲು ಗೊಂಡಿದ್ದರು.ಕೆಲ ವಿದ್ಯಾರ್ಥಿನಿಯರು ಅಕ್ಕಿ,ಬೇಳೆಯನ್ನು ಮೊರದಲ್ಲಿ ಹಾಕಿ ಕೇರುತ್ತಾ ಖುಷಿಪಟ್ಟರು.

ಮಕ್ಕಳಲ್ಲಿ ಈ ವಿಶಿಷ್ಟ ಹಬ್ಬದ ಹಿನ್ನೆಲೆ ಮತ್ತು ಪ್ರಾಮುಖ್ಯತೆಯ ಅರಿವು ಮೂಡಿಸಲು ಗೆಜ್ಜಗಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಭ್ರಮದಿಂದ ಸುಗ್ಗಿ ಹಬ್ಬವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಖುಷಿಯಿಂದ ಪಾಲ್ಗೊಂಡು ಸಂಭ್ರಮಿಸಿದುದನ್ನು ನೋಡಿ ಸ್ಥಳೀಯರು ಕೂಡಾ ಸಂತಸ ವ್ಯಕ್ತಪಡಿಸಿದರು.
