ಮೈಸೂರು: ಮೈಸೂರಿನ ಹೆಬ್ಬಾಳ ಎರಡನೇ ಹಂತದ ಸಮೀಪ ಕಾವೇರಿ ಸರ್ಕಲ್ ಹತ್ತಿರ ಹೊಸದಾಗಿ ಗೀತಾ ಡಯಾಗ್ನೋಸ್ಟಿಕ್ ಸೆಂಟರ್ ಪ್ರಾರಂಭವಾಗಿದೆ.
ಗೀತಾ ಡಯಾಗ್ನೋಸ್ಟಿಕ್ ಸೆಂಟರ್ ಅನ್ನು ಮಾನಸ ಡೆಂಟಲ್ ಹೆಲ್ತ್ ಸೆಂಟರ್ ಪ್ರೊಪ್ರೈಟರ್ ಡಾ. ಸೆಂದಿಲ್ ಸಿ ಕೆ,ಆಶಾ ಕಿರಣ ಹಾಸ್ಪಿಟಲ್ ಚೀಫ್ ಮೆಡಿಕಲ್ ಆಫೀಸರ್ ಡಾ. ವಿ ಎಚ್ ಡಿ ಸ್ವಾಮಿ ಅವರು ಉದ್ಘಾಟನೆ ಮಾಡಿದರು.
ಗೀತಾ ಡಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಡಯೋಗ್ನೆಸ್ಟಿಕ್ ಸೆಂಟರ್ ಮಾಲೀಕರಾದ ಗೀತಾ,ರಂಗಾಯಣದ ಹಿರಿಯ ಕಲಾವಿದರೂ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಗೌಡ ಸಮಾಜದ ಗೌರವ ಅಧ್ಯಕ್ಷೆ ಗೀತಾ ಮೋಂಟಡ್ಕ, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಮತ್ತಿತರರು ಪಾಲ್ಗೊಂಡು ಈ ನೂತನ ಡಯೋಗ್ನೆಸ್ಟಿಕ್ ಸೆಂಟರ್ ಅಭಿವೃದ್ಧಿ ಹೊಂದಲಿ ಬಡವರಿಗೆ ನೆರವಾಗಲಿ ಎಂದು ಶುಭ ಹಾರೈಸಿದರು.


 
                     
                    