ಶಿಕ್ಷಣದೊಂದಿಗೆ ನಿತ್ಯ ಗಾಯತ್ರಿ ಮಂತ್ರ ಪಠಿಸಿ: ಎಚ್ ವಿ ರಾಜೀವ್ ಸಲಹೆ

Spread the love

ಮೈಸೂರು: ಉಪನೀತ ವಟುಗಳು ಪ್ರತಿ ದಿನವೂ ಸಂಧ್ಯಾವಂದನೆ ಮಾಡಬೇಕು ಎಂದು ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್ ಕಿವಿ ಮಾತು ಹೇಳಿದರು.

ಶ್ರೀ ಚಿತ್ಕಲ ಟ್ರಸ್ಟ್ ಹಾಗೂ ಹೊಯ್ಸಳ ಕರ್ನಾಟಕ ಸಂಘದ ಸಹಯೋಗದೊಂದಿಗೆ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ 17 ನೂತನ ವಟುಗಳು ಉಪನಯನದಲ್ಲಿ ಯಗ್ನೋಪವಿತ ಧಾರಣೆ ಮಾಡಿದ ವೇಳೆ ರಾಜೀವ್ ಅವರು ವಟುಗಳಿಗೆ ಆಶೀರ್ವದಿಸಿ ಮಾತನಾಡಿದರು.

ಗಾಯತ್ರಿ ಮಂತ್ರ ಉಪದೇಶ ಪಡೆದಿರುವ ನೀವು ಶಿಕ್ಷಣ ದೊಂದಿಗೆ ನಮ್ಮ ಸಂಸ್ಕಾರವಾದ ಗಾಯತ್ರಿ ಮಂತ್ರ ಪಠಣ ಕಡ್ಡಾಯವಾಗಿ ಮಾಡ ಬೇಕು, ಗುರು ಹಿರಿಯರಿಗೆ ಗೌರವ ನೀಡುವುದನ್ನು ಮತ್ತು ನಮ್ಮ ಆಚಾರ, ವಿಚಾರವನ್ನು ಮರೆಯಬಾರದು ಎಂದು ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್ ರಂಗನಾಥ, ಚಿತ್ಕಲ ಟ್ರಸ್ಟ್ ಅಧ್ಯಕ್ಷರಾದ ಗುರು ರಮೇಶ್, ಕಾರ್ಯದರ್ಶಿ ಪ್ರಭಾಕರ್, ನಿರ್ದೇಶಕರುಗಳಾದ ಕೇಶವಚಂದ್ರ, ರವಿಶಂಕರ್, ಸುಬ್ರಹ್ಮಣ್ಯ, ಗಣೇಶ್ ಉಳ್ಳೂರ್,ಡಾll ಕಾರ್ತಿಕ್ ಪಂಡಿತ್, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ಎಂ ಎಸ್ ಪ್ರಶಾಂತ್, ಆದರ್ಶ ಸೇವಾ ಸಂಘದ ಅಧ್ಯಕ್ಷರಾದ ಜಿ ಆರ್ ನಾಗರಾಜ್, ವಿಪ್ರ ಮುಖಂಡರಾದ ಪರಾಶರಣ್ ಮುಂತಾದವರು ಉಪಸ್ಥಿತರಿದ್ದರು.