ಮೈಸೂರು: ಮೈಸೂರಿನ ಮಹಾಜನ ಮೈದಾನದಲ್ಲಿ ಪಂಚ ಗರುಡೋತ್ಸವ ನಿಮಿತ್ತ ಗರುಡ ಸಭಾ ರಚನೆಗೆ ಸಂಭ್ರಮದಿಂದ ಭೂಮಿ ಪೂಜೆ ನೆರವೇರಿಸಲಾಯಿತು.

ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಜ.29ರಂದು ಪಂಚಗರುಡೋತ್ಸವ ನಡೆಯಲಿದೆ.

ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ನಾರಯಣ ರಾಮಾನುಜ ಜೀಯರ್ ಅವರ ಮಾರ್ಗದರ್ಶನದಲ್ಲಿ ಪಂಚಗರುಡೋತ್ಸವ ನಡೆಯಲಿದೆ.

ನಿನ್ನೆ ನಡೆದ ಭೂಮಿ ಪೂಜಾ ಕಾರ್ಯಕ್ರಮವು ದೇವಸ್ಥಾನದ ಮುಖ್ಯಸ್ಥರಾದ ಯೋಗ ನರಸಿಂಹ,ವೀರ ರಾಘವನ್,ರಾಘವ ನರಸಿಂಹ,ಆನಂದ್,ಶಾಂತಾರಾಮ್ ಅವರುಗಳ ನೇತೃತ್ವದಲ್ಲಿ ನೆರವೇರಿತು.