ಮೈಸೂರು: ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನ್ ರಾವ್ ಅವರ 39ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಮೈಸೂರಿನ ರೈಲ್ವೆ ಸ್ಟೇಷನ್ ಮುಂಭಾಗ ಇರುವ ಬಾಬು ಜಗಜೀವನ್ ರಾವ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮೈಸೂರ್ ನಗರ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ರೇಖಾ ಶ್ರೀನಿವಾಸ್,23ನೇ ವಾರ್ಡಿನ ಮುಖಂಡರಾದ ರವಿಚಂದ್ರ, ಪ್ರಮೋದ್, ರಫಿವುಲ್ಲಾ ಖಾನ್, ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಲೋಕೇಶ್, ಕಾಂಗ್ರೆಸ್ ವಕ್ತಾರ ರಾಜೇಶ್, ಕೃಷ್ಣಪ್ಪ ಗಂಟಯ್ಯ ಮತ್ತಿತರರು ಬಾಬು ಜಗಜೀವನ್ ರಾವ್ ಅವರಿಗೆ ನಮನ ಸಲ್ಲಿಸಿದರು.