ಮೈಸೂರು: ಗಾಂಜಾ ಸಂಗ್ರಹಿಸಿ ಇಟ್ಟುಕೊಂಡಿದ್ದ ಮಹಿಳೆಯನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾ (50)ಬಂಧಿತ ಆರೋಪಿ.
ಆರೋಪಿ ಸಲ್ಮಾಳಿಂದ 26 ಕೆ ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಈಕೆ ಪೋರೋಂ ಮಾಲ್ ಬಳಿ ಗಾಂಜಾ ಬಚ್ಚಿಟ್ಟಿದ್ದಳು.ಎಸಿಪಿಗಳಾದ ಮಹಮದ್ ರಾವತ್ಕರ್, ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಇನ್ಸಪೆಕ್ಟರ್ ಶಬ್ಬೀರ್ ಹುಸೇನ್, ಸಬ್ ಇನ್ಸಪೆಕ್ಟರ್ ಲೇಪಾಕ್ಷ ರಾಜು ಸೇರಿ ಹಲವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.