ಅಬಕಾರಿ ಅಧಿಕಾರಿಗಳ ದಾಳಿ:ರೈಲಿನಲ್ಲಿ ೧ ಕೆಜಿ ೬೯೨ ಗ್ರಾಂ ಗಾ* ವಶ

Spread the love

ಮೈಸೂರು: ಅಪರಿಚಿತ ವ್ಯಕ್ತಿ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ೧ ಕೆಜಿ ೬೯೨ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಇಲಾಖೆ ನಿರೀಕ್ಷಕಿ ಪೂಜಾ ರಾಮು ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು,
ದರ್ಬಾಂಗ್‌ನಿಂದ ಮೈಸೂರಿಗೆ ಬಂದ ಸೂಪರ್ ಫಾಸ್ಟ್ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುವ ಮಾಹಿತಿ ತಿಳಿದು
ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಉಪನಿರೀಕ್ಷಕ ರವಿಕುಮಾರ್, ಸಿಬ್ಬಂದಿಗಳಾದ ಎನ್.ಅಜಯ್, ಸಿ.ಮಂಜುನಾಥ್ ಹಾಗೂ ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ನಡೆಸಿ ಬೋಗಿಗಳನ್ನು ತಪಾಸಣೆ ನಡೆಸಿದಾಗ ಎಸಿ ಸಾಮಾನ್ಯ ಕೋಚ್‌ನಲ್ಲಿ ವಾರಸುದಾರರು ಇಲ್ಲದ ನೀಲಿಬಣ್ಣದ ಸೂಟ್‌ಕೇಸ್‌ನಲ್ಲಿ ಗಾಂಜಾ ಪತ್ತೆಯಾಗಿದೆ.

ಗಾಂಜಾ ವಶಪಡಿಸಿಕೊಂಡು ಎನ್‌ಡಿಎಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ,ಆರೋಪಿ ಪತ್ತೆಗೆ ತಲಾಶಿ ಪ್ರಾರಂಭಿಸಿದ್ದಾರೆ.