ಮಳೆಯ ನಡುವೆಯೇ ದಸರಾ ಯುವ ಸಂಭ್ರಮ ಕಣ್ ತುಂಬಿಕೊಂಡ ಜನತೆ

Spread the love

ಮೈಸೂರು: ದಸರಾ ಯುವ ಸಂಭ್ರಮದಲ್ಲಿ ರಾಜೇಂದ್ರ ನಗರ ಶ್ರೀ ಛಾಯದೇವಿ ಕಾಲೇಜ್ ಆಫ್ ಎಜುಕೇಷನ್ ವಿದ್ಯಾರ್ಥಿಗಳು ಗ್ಯಾರಂಟಿ ಯೋಜನೆ ಅನುಷ್ಠಾನ ಗೀತ ಗುಚ್ಚ ನೃತ್ಯ ನೀಡಿ ಎಲ್ಲರ ಮನ ರಂಜಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಅವರ ಭಾವಚಿತ್ರ ಹಿಡಿದು ಸರ್ಕಾರ ನೀಡಿರುವ ಎಲ್ಲಾ ಉಚಿತ ಭಾಗ್ಯಗಳನ್ನು ಭಿತ್ತರಿಸುವ ಮೂಲಕ ಅರಿವು ಮೂಡಿಸಿದ ನೃತ್ಯ ಯುವ ಸಮೂಹವನ್ನು ಸೆಳೆಯಿತು.

ಮೈಸೂರಿನ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ‌ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ ಬಿ‌.ಆರ್ ಅಂಬೇಡ್ಕರ್ ಅವರ ರಾಷ್ಟ್ರ ಸಂವಿಧಾನಕ್ಕೆ ನೀನೆ ಶಿಲ್ಪಿಯು ನೀನೇ ಕಲಿಸಿಕೊಟ್ಟೆ ಸಮಾನತೆಯನ್ನು ಹಾಡಿಗೆ ನೃತ್ಯ ಮಾಡಿ ರಂಜಿಸಿದರು.

ದಸರಾ ಯುವ ಸಂಭ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಧಾರಿತ
ಡಾ ವಿಷ್ಣುವರ್ಧನ್ ನಟಿಸಿರುವ ಸಿಂಹಾದ್ರಿಯ ಸಿಂಹ ಹಾಡನ್ನು ಕೇಳಿಸುವುದರ ಮುಖಾಂತರ ಬಿ. ಇ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ವಿ ರವಿಚಂದ್ರನ್ ನಟಿಸಿರುವ ಆಟ ಹುಡುಗಾಟವೋ ಪರಮಾತ್ಮನಾ ಆಟವೋ ಹಾಡಿಗೆ ನೃತ್ಯ ಮಾಡುತ್ತಾ ಜಿನುಗುವ ಮಳೆಯಲ್ಲು ಯುವಜನತೆ ಕುಣಿದು ಕುಪ್ಪಳಿಸುವಂತೆ ಮಾಡಿದರು.

ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನ ತಂಡವು ಕನ್ನಡ ಸಿನಿಮಾಧಾರಿತ ನೃತ್ಯವನ್ನು ಪ್ರಸ್ತುತಪಡಿಸಿ ಮನರಂಜಿಸಿದರು.

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆದಿವಾಸಿ ಸಮುದಾಯದ ಜೀವನ ಶೈಲಿ,ಅವರ ಸಂಸ್ಕತಿ ಯನ್ನು ಬಲೂನ್ ಗಳ ನೃತ್ಯದ ಮೂಲಕ ರಂಜಿಸಿದರು.

ಜೋರು ಮಳೆ ನೆಉವೆಯೇ ಯುವ ಸಮೂಹ ಕೊಡೆ ಹಿಡಿದುಕೊಂಡೇ ನೃತ್ಯವನ್ನು ವೀಕ್ಷಿಸಿದ್ದು‌ ವಿಶೇಷ.