ಮಧ್ಯಪ್ರದೇಶದಲ್ಲಿ ಪೈಶಾಚಿಕ ಕೃತ್ಯ:ಪತಿಯ ಎದುರೆ ಪತ್ನಿ ಮೇಲೆ ಗ್ಯಾಂಗ್ ರೇಪ್

Spread the love

ಭೋಪಾಲ್: ಪತಿಯ ಎದುರೆ ಪತ್ನಿಯ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಲ್ಲದೆ ಕಿರಾತಕರು ಮಹಿಳೆಯ ಮೇಲಿನ ಗ್ಯಾಂಗ್ ರೇಪ್ ಅನ್ನು ವಿಡಿಯೋ ಮಾಡಿಕೊಂಡಿದ್ದು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ನವದಂಪತಿ ಗುಢ್ ಪೊಲೀಸ್ ಠಾಣೆ ವ್ಯಾಪ್ತಿಯ ಭೈರವನಾಥ ದೇವಸ್ಥಾನಕ್ಕೆ ವಿಹಾರಕ್ಕೆಂದು ಹೋಗಿದ್ದರು. ದಿಢೀರನೆ ಐದು ಮಂದಿ ಬಂದು ಮೊದಲು ಪತಿಯನ್ನು ಥಳಿಸಿ, ಆತನ ಎದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಈ ಹೇಯ ಘಟನೆಯಲ್ಲಿ ಏಳೆಂಟು ಮಂದಿ ಭಾಗಿಯಾಗಿರುವ ಶಂಕೆ ಇದೆ ಎಂದು ರೇವಾ ಎಸ್ಪಿ ವಿವೇಕ್ ಸಿಂಗ್ ಹೇಳಿದ್ದಾರೆ.

ಆರೋಪಿಗಳು ಸ್ಥಳದಲ್ಲಿ ಪಾರ್ಟಿ ಮಾಡುತ್ತಿದ್ದರು. ಅಲ್ಲಿ ಲಿಟ್ಟಿ, ಮಾಂಸ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಆರೋಪಿಗಳು ರೇವಾ ಜಿಲ್ಲೆಯವರು.

ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.