ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸುಪ್ರೀಂ ಸ್ಟಾರ್ ಶಶಿಕುಮಾರ್ ಭೇಟಿ ನೀಡಿದ್ದರು.
ಮೈಸೂರು ನಗರಕ್ಕೆ ಆಗಮಿಸಿದ ಗಣೇಶ್ ಹಾಗೂ ಶಶಿಕುಮಾರ್ ಅವರು ಅಭಿಮಾನಿಗಳೊಂದಿಗೆ ಕೃಷ್ಣಂ ಪ್ರಣಯ ಸಖಿ ಚಿತ್ರದ 50 ನೇ ದಿನದ ಸಂಭ್ರಮ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ ಅಪ್ಪಣ್ಣ ಹಾಗೂ ಕೆ ಆರ್ ಕ್ಷೇತ್ರದ ಎಸ್ ಟಿ ಮೋರ್ಚಾ ಅಧ್ಯಕ್ಷ ನಂದೀಶ್ ನಾಯಕ,ರವಿ ಹಂಚ್ಯ,ಬದನಾಳು ನಾರಾಯಣ್,ಸತೀಶ್ ಬಾಬು,ಉಮೇಶ್ ಉದ್ಭುರ್,ಸುರೇಶ್,ಮದಕರಿ ಮಹಾದೇವ ಹಾಗೂ ಯುವ ಮಿತ್ರರು ಗಣೇಶ್ ಹಾಗೂ ಶಶಿಕುಮಾರ್ ಅವರುಗಳಿಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.