ಗಣೇಶ ಕಲ್ಚರ್ ಅಂಡ್ ಎಜುಕೇಶನ್ ಟ್ರಸ್ಟ್ ನಿಂದ ವೃದ್ಧರಿಗೆ ಸ್ವೆಟರ್, ಮಫ್ಲರ್ ವಿತರಣೆ

Spread the love

ಮೈಸೂರು: ಕೆ ಆರ್ ಎಸ್ ರಸ್ತೆಯಲ್ಲಿರುವ ದಯಾಶಂಕರ ವೃದ್ಧಾಶ್ರಮ ಮತ್ತು ಪ್ರಕೃತಿ ವೃದ್ಧಾಶ್ರಮದವರಿಗೆ ಶ್ರೀ ಗಣೇಶ ಕಲ್ಚರ್ ಅಂಡ್ ಎಜುಕೇಶನ್ ಟ್ರಸ್ಟ್ ಮತ್ತು ಲಿಟಲ್ ಸ್ಟಾರ್ ಕಿಂಡರ್ ಗಾರ್ಡನ್ ವತಿಯಿಂದ ಸ್ವೆಟರ್ ಮತ್ತು ಮಫ್ಲರ್ ವಿತರಿಸಿ‌ ಮಾದರಿಯಾಗಿದ್ದಾರೆ.

ಚಳಿ, ಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವೃದ್ಧಾಶ್ರಮದ ವೃದ್ಧರಿಗೆ ಸ್ವೆಟರ್ ಮತ್ತು ಮಫ್ಲರ್ ವಿತರಿಸಿ ಆರೋಗ್ಯದ ಬಗ್ಗೆ ಗಮನ ನೀಡಬೇಕೆಂದು ತಿಳುವಳಿಕೆ ನೀಡಲಾಯಿತು.

ಈ ವೇಳೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಶೋಭಾ ರಾಣಿ ಚಳಿಗಾಲದೊಂದಿಗೆ ಚಂಡಮಾರುತಗಳ ಪ್ರಭಾವದಿಂದ ಪ್ರಸ್ತುತ ದಿನಗಳಲ್ಲಿ‌ ಶೀತ ವಾತಾವರಣ ಹೆಚ್ಚಾಗಿದೆ, ಈ ನಿಟ್ಟಿನಲ್ಲಿ ಬಡವರಿಗೆ ಕೈಲಾದ ಸಹಾಯಮಾಡಬೇಕೆಂಬ ಉದ್ದೇಶದಿಂದ ಈ ಸಣ್ಣ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಮತಾ, ರೂಪ, ಶಿವು, ಜಯಂತಿ ,ಮಧು, ಕಾರ್ತಿಕ್ ಮತ್ತಿತರರು ಹಾಜರಿದ್ದರು.