ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಪ್ರಾರಂಭವಾಗಿದ್ದು ಜನರ ಗದ್ದಲಕ್ಕೆ ಹೊಂದಿಕೊಳ್ಳಲು ಗಜಪಡೆಗೆ ಪ್ರತಿದಿನ ತಾಲೀಮು ನೀಡಲಾಗುತ್ತಿದೆ.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದಸರಾ ಗಜಪಡೆಯನ್ನು ಮೈಸೂರು ಅರಮನೆ ಆವರಣದಿಂದ ಬನ್ನಿಮಂಟಪದ ವರೆಗೆ ಕರೆದೊಯ್ಯಲಾಗುತ್ತದೆ.
ಸಂಜೆ ಅರಮನೆಯಿಂದ ಗಜಪಡೆಯನ್ನು ಮಾವುತರು ಕಾವಾಡಿಗಳು ಅತಿ ಎಚ್ಚರಿಕೆಯಿಂದ ಕರೆದೊಯ್ಯುತ್ತಾರೆ. ಈ ವೇಳೆ ಪೊಲೀಸರು ಜನರು ಆನೆಗಳ ಬಳಿ ಬರದಂತೆ ಪದೇ ಪದೇ ಮನವಿ ಮಾಡುತ್ತಲೇ ಇರುತ್ತಾರೆ.
ಆದರೂ ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನು ನೋಡುವುದೇ ಕಣ್ಣಿಗೆ ಹಬ್ಬ.ಅವು ಮರೆಯಾಗುವ ತನಕ ನೋಡುತ್ತಲೇ ಇರೋಣ ಅನಿಸುತ್ತದೆ.
ನಗರ ಬಸ್ ನಿಲ್ದಾಣದ ಬಳಿ ಯುವ ಪಡೆಯಂತೂ ತಮ್ಮ ಮೊಬೈಲ್ ನಲ್ಲಿ ಆನೆಗಳನ್ನು ಸರೆಹಿಡಿಯಲು ಮುನ್ನುಗ್ಗುತ್ತಾರೆ.ಅಂತೂ ದೀಪದ ಬೆಳಕಲ್ಲಿ ಗಾಂಬೀರ್ಯದಿಂದ ಸಾಲಾಗಿ ಸಾಗುವ ಆನೆಗಳನ್ನು ನೋಡುವುದೇ ಅದೃಷ್ಟ.