ಮೈಸೂರು: ಮೂರನೇ ಆಷಾಢ ಶುಕ್ರವಾರದ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಾಡ ಅದಿದೇವತೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.
ಶುಕ್ರವಾರ ಬೆಳಗಿನ ಜಾವವೇ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಮೆಟ್ಟಿಲುಗಳನ್ನು ಹತ್ತಿ ಬಂದು ದೇವಿಯ ದರ್ಶನಕ್ಕೆ ಕಾದು ನಿಂತಿದ್ದರು.
ಮುಂಜಾನೆ ನಾಲ್ಕು ಗಂಟೆಗೆ ದೇವಿಗೆ ದೇವಿಕೆರೆಯಿಂದ ಜಲವನ್ನು ತಂದು ಅಭಿಷೇಕ ಮಾಡಿ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ನೆರವೇರಿಸಲಾಯಿತು. ಅಷ್ಟೋತ್ತರ ಸಹಸ್ರನಾಮ ನೆರವೇರಿಸಿ ಮಹಾ ನೈವೇದ್ಯವಾದ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕೋಟ್ಯಾಂತರ ಭಕ್ತರಿಗೆ ಶ್ರೀ ಚಾಮುಂಡೇಶ್ವರಿ ತಾಯಿ ಆಶಿರ್ವಾದ ಮಾಡಿದ್ದಾಳೆ.ಅದಕ್ಕಾಗಿಯೇ ಮೈಸೂರಿನ ಸುತ್ತಾ ಮುತ್ತಲಿನ ಭಕ್ತರಿಗಿಂತ ವಿವಿಧ ಜಿಲ್ಲೆ,ರಾಜ್ಯ,ವಿದೇಶದಿಂದಲೂ ಬಂದು ತಾಯಿಯ ದರ್ಶನ ಪಡೆಯುತ್ತಾರೆ.
ಗರ್ಭ ಗುಡಿಯೊಳಗೆ ಶ್ರೀ ಚಾಮುಂಡೇಶ್ವರಿ ತಾಯಿ ನಾಗಲಕ್ಷ್ಮೀ ಅಲಕಾರದಲ್ಲಿದ್ದರೇ ಇತ್ತ ಉತ್ಸವ ಮೂರ್ತಿಯ ಚಾಮುಂಡೇಶ್ವರಿಗೆ ಗಜಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.ನಾಡ ಅಧಿದೇವತೆ ನೋಡಲು ಎರಡು ಕಣ್ಣು ಸಾಲದಂತಾಗಿತ್ತು.

ಶ್ರೀ ಚಾಮುಂಡೇಶ್ವರಿ ತಾಯಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷೀತ್ ಹಾಗೂ ಪುರೋಹಿತರು ಮುಂಜಾನೆ ಪಂಚಾಮೃತ ಅಭಿಷೇಕ,ಕುಂಕುಮಾರ್ಚನೆ,
ಮಹಾಮಂಗಳಾರತಿನೆರವೇರಿಸಿದರು.
ದೇವಸ್ಥಾನದ ಹೊರಾಂಗಣ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ಎಂದಿನಂತೆಯೇ ಬೆಟ್ಟ ಹತ್ತಿ ಬರುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ,2000,300 ರೂ ಹಾಗೂ ಧರ್ಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸರತಿ ಸಾಲಿನಲ್ಲಿ ನಿಂತ ಭಕ್ತರು ಚಾಮುಂಡೇಶ್ವರಿ ತಾಯಿಯ ಅಲಂಕಾರ ಕಣ್ತುಂಬಿಕೊಂಡು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ದೇವರ ದರ್ಶನ ಪಡೆದು ಬಂದ ಮುತೈದೆಯರಿಗೆ ಮಡಿಲಕ್ಕಿ ನೀಡಿದರೇ
ಪುರುಷ ಭಕ್ತರಿಗೆ ದೇವಿಯ ಕುಂಕುಮ ಪ್ಯಾಕೇಟ್ ವಿತರಿಸಲಾಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರಿನ ಎಲ್ಲಾ ಪೋಲಿಸ್ ಠಾಣೆಯಿಂದ ಪೋಲೀಸರನ್ನ ನಿಯೋಜನೆ ಮಾಡಲಾಗಿತ್ತು. ಮಹಿಳೆಯರ ಸುರಕ್ಷತಾ ದೃಷ್ಠಿಯಿಂದ ಮಹಿಳಾ ಪೋಲಿಸರನ್ನ ನೇಮಿಸಲಾಗಿತ್ತು.
ಪ್ರತಿ ವರ್ಷದಂತೆ ಈ ಬಾರಿಯೂ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿದ್ದು ಲಲಿತ ಮಹಲ್ ಮೈದಾನದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ವಸ್ತ್ರ ಸಂಹಿತೆ ಶ್ರೀ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಇನ್ನೂ ಜಾರಿಯಾಗಿಲ್ಲ.ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಕೆಲ ಸಂಘಟನೆಗಳು,ಸಂಘ ಸಂಸ್ಥೆಗಳು ಹೋರಾಟ ಮಾಡಿ ಸರ್ಕಾರಕ್ಕೆ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಕೂಡ ವಸ್ತ್ರಸಂಹಿತೆ ಜಾರಿಗೆ ಇನ್ನೂ ಉತ್ತರ ಸಿಕ್ಕಿಲ್ಲ.ಮುಂದಿನ ದಿನಗಳಲ್ಲಾದರೂ ವಸ್ತ್ರಸಂಹಿತೆ ಜಾರಿಯಾದರೆ ಚನ್ನಾಗಿರುತ್ತದೆ.
ಮೂರನೇ ಆಷಾಢ ಶುಕ್ರವಾರದ ಪ್ರಯುಕ್ತ ವಿಐಪಿ ಗಳು ಆಗಮಿಸಿ ದೇವಿಯ ದರ್ಶನ ಪಡೆದರು.
ಗೃಹ ಸಚಿವ ಪರಮೇಶ್ವರ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಚಿತ್ರನಟ ಸುದೀಪ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ದೇವಿ ಚಾಮುಂಡೇಶ್ವರಿಯ ದರ್ಶನ ಪಡೆದರು.