ಸಾಲ ತೀರಿಸಲಾಗದೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ

Spread the love

ಗದಗ: ಸಾಲ ಮಾಡಿ ತೀರಿಸಲಾಗದೆ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಈ‌ ಘಟನೆ ನಡೆದಿದ್ದು,
ಸಿದ್ದಲಿಂಗಯ್ಯ ವಸ್ತ್ರದ (50) ನೇಣು ಹಾಕಿಕೊಂಡ ರೈತ.

ನಿನ್ನೆ ತಡ ರಾತ್ರಿ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಿದ್ದಲಿಂಗಯ್ಯ ವಸ್ತ್ರದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆವಿಜಿ ಬ್ಯಾಂಕ್ 4 ಲಕ್ಷ ಕೃಷಿ ಸಾಲ, ಕೆಸಿಸಿ ಬ್ಯಾಂಕ್ ನಲ್ಲಿ 80 ಸಾವಿರ ಸಾಲ, 2.50 ಚಿನ್ನದ ಸಾಲ, ಟ್ಯಾಕ್ಟರ್ ಸಾಲ 1.50 ಸಾಲ..
ಹೀಗೆ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದರು.

ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ರೈತ ಕಂಗಾಲಾಗಿದ್ದರು.ಸಾಲ ತೀರಿಸುವುದು ಹೇಗೆಂದು ಮನನೊಂದು ರೈತ ಸಿದ್ದಲಿಂಗಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೋಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ದೇಹವನ್ನು ಮಹಜರು ಮಾಡಿಸಿ ಕುಟುಂಬದವರಿಗೆ ನೀಡಿದ್ದು ಮನೆಯವರ ದುಃಖದ ಕಟ್ಟೆ ಒಡೆದಿತ್ತು.