ದೃಷ್ಟಿ ವಿಕಲಚೇತನರಿಗೆ ದಿನಸಿ ಸಾಮಗ್ರಿ, ಹಣ್ಣು ವಿತರಿಸಿ‌ ವಿಷ್ಣು ಸ್ಮರಣೆ

Spread the love

ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ದೃಷ್ಟಿ ವಿಕಲಚೇತನರಿಗೆ ದಿನಸಿ ಸಾಮಗ್ರಿ, ಹಣ್ಣು ವಿತರಿಸುವ ಮೂಲಕ ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಮಾಡಲಾಯಿತು.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಜೆಎಸ್ಎಸ್ ಸಂಸ್ಥೆಯವರ ದೃಷ್ಟಿ ದೋಷವುಳ್ಳ ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ನಿಲಯದ ಬಂಧುಗಳಿಗೆ ಹಣ್ಣು ಹಂಪಲು ಹಾಗೂ ದಿನಸಿ ಸಾಮಗ್ರಿಗಳನ್ನು‌ ವಿತರಿಸಿ ವಿಷ್ಣುವರ್ಧನ್ ಅವರನ್ನು ಸ್ಮರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್,
ಕನ್ನಡಿಗರ ಕಣ್ಮಣಿ ಡಾ. ವಿಷ್ಣುವರ್ಧನ್ ಮಾನವೀಯ ಮೌಲ್ಯಗಳ ಹರಿಕಾರರಾಗಿ, ಉತ್ತಮ ನಟನೆಯ ಮೂಲಕ ಜನ ಮಾನಸದಲ್ಲಿ ಹಸಿರಾಗಿದ್ದಾರೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ನಿಲಯ ಪಾಲಕಿ ಅನಿತಾ, ಡಾ:ಬಿ. ಎಸ್. ಪ್ರೇಮ ಕುಮಾರಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್ ,ವೀರಭದ್ರ ಸ್ವಾಮಿ, ಮಹದೇವ್,ಯಶ್ವಂತ್ ಕುಮಾರ್,ಮಹೇಶ್, ರಾಜೇಶ್ ಕುಮಾರ್, ನವನೀತ್ ಕುಮಾರ್, ಜಯಮ್ಮ, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.