ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಗಾಂಧಿ ಜಯಂತಿ

Spread the love

ಮೈಸೂರು: ಚಾಮುಂಡೇಶ್ವರಿ ಬಳಗ ಹಾಗೂ ಎಸ್ ಕೆ ಫೌಂಡೇಶನ್ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಮಹಾತ್ಮ ಗಾಂಧೀಜಿ ರವರ 155ನೇ ಜಯಂತಿ‌ ಆಚರಿಸಲಾಯಿತು.

ಈ ವೇಳೆ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಗಾಂಧಿ ಸ್ಮರಣೆ ಮಾಡಲಾಯಿತು.

ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಸುಬ್ಬರಾಯನಕೆರೆ ರವಿಚಂದ್ರ, ಎಸ್ ಕೆ ಫೌಂಡೇಶನ್ ಅಧ್ಯಕ್ಷ ಸಂತೋಷ್ ಕಿರಾಳು, ರಾಕೇಶ್, ದುರ್ಗಾ ಪ್ರಸಾದ್, ಕಡಕೋಳ ಶಿವಲಿಂಗು, ಲೋಕೇಶ್, ಚೇತನ್, ಶಫೀ, ವರುಣ ಮಹದೇವ್, ಜಿ ರಾಘವೇಂದ್ರ,ಎಸ್ ಎನ್ ರಾಜೇಶ್, ರಾಜೇಶ್ ಪಳನಿ, ವಿನಯ್ ಕಣಗಾಲ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.