ಉಚಿತ ಸಾಮೂಹಿಕ ವಿವಾಹ

Spread the love

ಮೈಸೂರು: ರಾಜ್ಯ ಅಹಿಂದ ಜನ ಜಾಗೃತಿ ವೇದಿಕೆ ಬೆಂಗಳೂರು ವತಿಯಿಂದ ಎಲ್ಲಾ ಜಾತಿಯ ವಧು, ವರರ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.

ಎಲ್ಲ ಜಾತಿಯ ವಧು ವರರಿಗೆ, ಅಂಗವಿಕಲರಿಗೆ ವಿಧುರ ವಿಧವೆ ಯರಿಗೆ ಹಾಗೂ ಅಂತರ್ಜಾತಿಯ ಮದುವೆಗೆ ರಾಜ್ಯ ಅಹಿಂದ ಜನ ಜಾಗೃತಿ ವೇದಿಕೆ ವತಿಯಿಂದ ಏಪ್ರಿಲ್ 28ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜನಜಾಗೃತಿ ಸುರೇಶ್ ಪಿಕೆ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾಧ್ಯಕ್ಷ ಚೆಲುವರಾಜು ಮತ್ತು ಸಂಸ್ಥಾಪಕ ಅಧ್ಯಕ್ಷ ಜನ ಜಾಗೃತಿ ಸುರೇಶ್ ಪಿಕೆ ಅವರನ್ನು ಕೆಳಕಂಡ ಮೊಬೈಲ್ ನಂಬರುಗಳಲ್ಲಿ ಸಂಪರ್ಕಿಸಬಹುದು.

8861656476,9945440099,9740598028,9606431017,ಈ ನಂಬರ್ ಗಳಲ್ಲಿ ಸಂಪರ್ಕಿಸಬಹುದು.