ರೋಗ ಬರುವ ಮನ್ನ ಎಚ್ಚರ ವಹಿಸಿದರೆ ಒಳಿತು:ಹರೀಶ್ ಗೌಡ ಸಲಹೆ

Spread the love

ಮೈಸೂರು: ರೋಗಗಳು ಬರುವ ಮನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಔಷಧಿಗಳಿಂದ ದೂರವಿರಬಹುದು ಎಂದು ಶಾಸಕ‌ ಹರೀಶ್ ಗೌಡ ಹೇಳಿದರು.

ನಗರದ ಭಾವಸಾರ‌ ಕ್ಷತ್ರಿಯ ಶ್ರೀ ಪಾಂಡುರಂಗ ವಿಠಲ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಏಡ್ಸ್
ಪ್ರಿವೆನ್‌ಷನ್ ಸೊಸೈಟಿ, ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಮೈಸೂರು ಸೇರಿದಂತೆ ವಿವಿಧ ಆಸ್ಪತ್ರೆಗಳು ಸಂಘ,ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವಾಗಿದ್ದರೆ ಸುಖವಾಗಿ ಬಾಳಬಹುದು, ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಸುರಿಯಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ಕಿವಿಮಾತು‌ ಹೇಳಿದರು.

ಉಚಿತ ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಶಿಬಿರಗಳನ್ನು ನಗರದಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ಹರೀಶ್ ಗೌಡ ಸಲಹೆ ನೀಡಿದರು.

ಶಿಬಿರದಲ್ಲಿ 300ಕ್ಕೂ ಹೆಚ್ಚು ಮಂದಿ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದುಕೊಂಡರು

ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್ ಹಾಗೂ ನಿಯಂತ್ರಣ ಅಧಿಕಾರಿ ಡಾ. ಜಯಂತ್, ಜಿಲ್ಲಾ ಮೇಲ್ವಿಚಾರಕರಾದ ಸವಿತಾ ಬಿ,
ಇಎಸ್ಐ ಆಸ್ಪತ್ರೆಯ ವೈದ್ಯಾಧಿಕಾರಿ ಕೆ ಟಿ ಅನಿತಾ,ಆಪ್ತ ಸಮಾಲೋಚಕರು ಚಂದ್ರಕಲಾ, ವಿ ಬಿ ನಾಗೇಂದ್ರ ಪ್ರಸಾದ್, ಎಸ್ ಗೋಪಾಲ್, ಸಿದ್ದೇಶ್ವರಪ್ಪ, ಭಾವಸಾರ ಕ್ಷತ್ರಿಯ ಮಂಡಳಿಯ ಪಾಂಡುರಂಗ ವಿಠಲ ದೇವಸ್ಥಾನದ ಅಧ್ಯಕ್ಷರಾದ ಶಿವಾಜಿ ರಾವ್, ಕಾರ್ಯದರ್ಶಿ ಗಿರೀಶ್,
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸ್ಥಳೀಯ ಮುಖಂಡರಾದ ರಾಜಕೀಯ ರವಿ, ರಾಕೇಶ್ ನಾಯಕ್, ಶ್ರೀನಿವಾಸ್ ಪತಂಗೆ, ನಾಗರಾಜ್ ಪತಂಗೆ, ರಮೇಶ್ , ಉಮಾ ಶಂಕರ್, ಚಂದ್ರಪ್ಪ, ಮನ್ ಕಿ ಬಾತ್ ಸಂತೋಷ್, ಅಶೋಕ್, ಪಿಪಿ ತೇಜಾವತಿ, ಕೆ ವೈ ರಾಧಾಮಣಿ, ಯಶೋದಮ್ಮ ಮತ್ತಿತರರು ಹಾಜರಿದ್ದರು.