ಸರ್ಕಾರಿ ಶಾಲೆ ಮಕ್ಕಳಿಗೆಉಚಿತ ರಕ್ತದಾನದ ಗುಂಪಿನ ಪರೀಕ್ಷೆ

Spread the love

ಮೈಸೂರು: ಮಂಚೇಗೌಡನ ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ರಕ್ತದಾನದ ಗುಂಪಿನ ಪರೀಕ್ಷೆ ಹಮ್ಮಿಕೊಳ್ಳಲಾಯಿತು.

ಇನ್ನರ್ ವೀಲ್ ಕ್ಲಬ್ ಅಫ್ ಮೈಸೂರು ಗೋಲ್ಡ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ 300ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ರಕ್ತದ ಗುಂಪಿನ ಪರೀಕ್ಷೆ ಹಾಗೂ ಮಕ್ಕಳ ಗುರುತಿನ ಚೀಟಿ ವಿತರಿಸಿ ರಕ್ತದಾನದ ಬಗ್ಗೆ ಜಾಗೃತಿ ಮಂಡಿಸಲಾಯಿತು.

ಈ ವೇಳೆ ಮಾತನಾಡಿದ ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು ಅವರು,
ಮಕ್ಕಳ ಆರೋಗ್ಯ ರಕ್ಷಣೆಯು ಸಮಾಜದ ಜವಾಬ್ದಾರಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಮೊದಲು ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬೇಕು ಎಂದು ಹೇಳಿದರು.

ಆರೋಗ್ಯವಂತ ಮಕ್ಕಳಿಂದ ಮಾತ್ರ ಸದೃಢ ಸಮಾಜ, ದೇಶ ನಿರ್ಮಾಣ ಸಾಧ್ಯವಾಗುತ್ತದೆ, ಸದೃಢವಾದ ದೇಶ ನಿರ್ಮಾಣ ಮಾಡಲು ಮೊದಲು ಸದೃಢವಾದ ಪ್ರಜೆಗಳನ್ನು ರೂಪಿಸಬೇಕು, ಸದೃಢವಾದ ಪ್ರಜೆಗಳನ್ನು ರೂಪಿಸಲು ಆರೋಗ್ಯವಂತ ಮಕ್ಕಳು ಸಮಾಜದಲ್ಲಿ ಇರಬೇಕು ಇಂತಹ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಮಕ್ಕಳ ಆರೋಗ್ಯವನ್ನು ನಿರ್ಲಕ್ಷಿಸದೆ
ಕಾಲಕಾಲಕ್ಕೆ ತಪಾಸಣೆ ನಡೆಸಿ, ಅವಶ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು, ಸರ್ಕಾರವು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ತಪಾಸನೆ ಮತ್ತು ಔಷಧಿ ವಿತರಣೆ ಮಾಡುತ್ತಿದ್ದು ಇದನ್ನು ಎಲ್ಲರೂ ಸದುಪಯೋಗ‌ ಪಡಿಸಿಕೊಳ್ಳಬೇಕು ಎಂದು ರವಿ ಮಂಚೇಗೌಡನಕೊಪ್ಪಲು ಹೇಳಿದರು

ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಅಧ್ಯಕ್ಷರಾದ ರಶ್ಮಿ ಬಸವರಾಜ್ ಮಾತನಾಡಿ,ರಕ್ತದಾನ ಶ್ರೇಷ್ಠದಾನ ಇತರೆ ದಾನಗಳಲ್ಲಿ‌ ಇದು ಅಮೂಲ್ಯ ದನವಾಗಿದೆ, ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು ಹಾಗೂ ಅನೇಕ ಆರೋಗ್ಯಗಳಿಗೆ ಸಹಾಯವಾಗುತ್ತದೆ
ಎಂದು ತಿಳಿಸಿದರು.

ನಂತರ ಮಕ್ಕಳಿಗೆ ರಕ್ತದಾನದಿಂದ ಆಗುವ
ಪ್ರಯೋಜನಗಳ ಬಗ್ಗೆ
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಜಾಗೃತಿ ಮೂಡಿಸಿದರು.

ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರ್ ಗೋಲ್ಡ್ ಕಾರ್ಯದರ್ಶಿ ಪ್ರತಿಭಾ, ಮಾಜಿ ಅಧ್ಯಕ್ಷರಾದ ಡಾ. ಪ್ರೇಮಾ ರವಿ, ಶಾಲಿನಿ,
ಮಾಜಿ ಉಪ ಮಹಾಪೌರರಾದ ಮಹದೇವಪ್ಪ, ಶ್ರೀನಿವಾಸ್, ರಾಮಚಂದ್ರು, ಶಾಲೆಯ ಮುಖ್ಯ ಉಪಾಧ್ಯಾಯರಾದ ಶುಭ, ಸಹ ಶಿಕ್ಷಕರಾದ ಪುಷ್ಪ,ಅನುಪಮಾ,ಕೃಷ್ಣಮ್ಮ ಮತ್ತಿತರರು ಹಾಜರಿದ್ದರು.