ಹುಣಸೂರಿನಲ್ಲಿ ಉಚಿತ ಆಂಬುಲೆನ್ಸ್ಬಡವರ ಪಾಲಿಗೆ ಮರೀಚಿಕೆ

Spread the love

ಹುಣಸೂರು: ಹುಣಸೂರಿನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಎಂದು ಉಚಿತ ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗಿದೆ, ಆದರೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ಹುಣಸೂರಿನ ಶಾಸಕರು ಉಚಿತ ಆಂಬುಲೆನ್ಸ್ ನೀಡಿದ್ದು ಇದು ಸದಾ ಸರ್ಕಾರಿ ಆಸ್ಪತ್ರೆ ಮುಂದೆ ನಿಂತಿರುತ್ತದೆ.ಆದರೆ ಬಡವರ ಪಾಲಿಗೆ ಇದ್ದೂ ಇಲ್ಲದಂತೆ.

ಯಾರಾದರೂ ಅರ್ಜೆಂಟ್ ಇರುವ ರೋಗಿಗಳು ಈ ಆಂಬುಲೆನ್ಸ್ ಕರೆದರೆ ಚಾಲಕರು ಬರುವುದಿಲ್ಲ ಎಂದು ಹೇಳುತ್ತಾರೆ.

ಪೆಟ್ರೋಲ್ ಹಾಕಿಸಿ ಇಲ್ಲದಿದ್ದರೆ ಬರುವುದಿಲ್ಲ ಬೇರೆ ನೋಡಿಕೊಳ್ಳಿ ಎಂದು ಉದಾಸೀನವಾಗಿ ಹೇಳುತ್ತಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಹಣ ಇದ್ದವರು ಪೆಟ್ರೋಲ್ ಹಾಕಿಸಿಕೊಂಡೊ ಅಥವಾ ಹಣಕೊಟ್ಟೊ ಈ ಆಂಬುಲೆನ್ಸ್ ಪಡೆದುಕೊಂಡು ತಮ್ಮ ರೋಗಿಗಳನ್ನು ಕರೆದುಕೊಂಡು ಹೋಗುತ್ತಾರೆ, ಆದರೆ ಬಡಪಾಯಿ ಜನರು ಏನು ಮಾಡಬೇಕು ಅವರು ಎಲ್ಲಿಂದ ಹಣ ತಂದಾರು ಉಚಿತ ಎಂದು ಆಂಬುಲೆನ್ಸ್ ಮೇಲೆ ಯಾಕೆ ಬರೆಸಬೇಕು ಎಂದು ಚಲುವರಾಜು ಪ್ರಶ್ನಿಸಿದ್ದಾರೆ.

ಜನರಿಗೆ ಅನುಕೂಲವಾಗಲಿ ಎಂದು ಶಾಸಕರು ಉಚಿತವಾಗಿ ಆಂಬುಲೆನ್ಸ್ ವಾಹನ ಕೊಟ್ಟಿದ್ದಾರೆ ಆದರೆ ಆಂಬ್ಯುಲೆನ್ಸ್ ಚಾಲಕರು ಪೆಟ್ರೋಲ್ ಹಾಕಿಸಿ ಎಂದು ಹೇಳುತ್ತಾರೆ.ಇದು ಜನಸಾಮಾನ್ಯರಿಗೆ ಗೊತ್ತಾಗುವುದಿಲ್ಲ.

ಈ ಚಾಲಕರಿಂದ ಶಾಸಕರಿಗೂ ಕೆಟ್ಟ ಹೆಸರು ಬರುತ್ತಿದೆ, ಉಚಿತ ಎಂದು ಹೇಳಿ ವಾಹನ ಕೊಟ್ಟು ಈಗ ಪೆಟ್ರೋಲ್ ಹಾಕಿಸಿಕೊಳ್ಳಿ ಎಂದರೆ ಜನ ಏನು ತಿಳಿದುಕೊಂಡಾರು ಯಾರೋ ಮಾಡಿದ ಕೆಲಸಗಳಿಂದ ಶಾಸಕರಿಗೆ ಕೆಟ್ಟ ಹೆಸರು ಬರುತ್ತದೆ, ಕೂಡಲೇ ಈ ಬಗ್ಗೆ ಹುಣಸೂರಿನ ಶಾಸಕರು ಗಮನಹರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಬಡವರಿಗೆ ಉಚಿತ ಇಲ್ಲದ ಮೇಲೆ ಅದನ್ನು ಆಸ್ಪತ್ರೆ ಮುಂದೆ ಏಕೆ ನಿಲ್ಲಿಸಬೇಕು ಯಾರದೋ ಹೆಸರಿನಲ್ಲಿ ಇನ್ಯಾರೋ ಹಣ ಮಾಡಿಕೊಳ್ಳಲಿ ಎಂದೇ ಎಂದು ಅವರು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಒಬ್ಬ ರೋಗಿ ತೀವ್ರ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದರು.ನಾವು ಸ್ಥಳದಲ್ಲೆ ಇದ್ದೆವು,ರೋಗಿಯ ಕಡೆಯವರು ಆಂಬುಲೆನ್ಸ್ ಕೇಳಿದ್ದಕ್ಕೆ ಚಾಲಕ ಬರಲಿಲ್ಲ,ಪೆಟ್ರೋಲ್ ಹಾಕಿಸುತ್ತೇವೆ ಎಂದರೂ ಬರಲಿಲ್ಲ. ಸುಮಾರು ಒಂದೂವರೆ ಗಂಟೆ ಕಾದರೂ ಬರಲಿಲ್ಲ, ಪ್ರತಿದಿನ ಇದೇ ಕಥೆ ಎಂದು ಚಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಶಾಸಕರ‌ ಹೆಸರನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ,ಅವರ ಫೋಟೊ ಕೂಡಾ ಆಂಬುಲೆನ್ಸ್ ಮೇಲೆ ಇದೆ.ಉಚಿತ ಎಂದ‌ ಮೇಲೆ ಪೂರ್ಣವಾಗಿ ಉಚಿತವಾಗಿರಬೇಕು ಹಾಗಿಲ್ಲದ ಮೇಲೆ‌‌ ಆಂಬುಲೆನ್ಸ್‌ ತಗೊಂಡು ಹೋಗಿ ಅವರ ಮನೆ ಮುಂದೆ ನಿಲ್ಲಿಸಿಕೊಳ್ಳಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮ್ಮನೆ ಪೋಸ್ ಕೊಡಲು ಸರ್ಕಾರಿ ಆಸ್ಪತ್ರೆ ಮುಂದೆ ಆಂಬುಲೆನ್ಸ್ ನಿಲ್ಲಿಸುತ್ತಾರೆ. ಬಡವರಿಗೆ ಉಪಯೋಗವಾಗದ‌ ಮೇಲೆ ಈ ವಾಹನ ಏಕೆ ಇಲ್ಲಿ ನಿಲ್ಲಬೇಕು? ಆಸ್ಪತ್ರೆ ಆಡಳಿತ ಮಂಡಳಿ,ಸ್ಥಳೀಯ ಆಡಳಿತ‌,ಆರ್ ಟಿ ಒ ಅಧಿಕಾರಿಗಳು ಮತ್ತು ಖುದ್ದು ಶಾಸಕರು ಇದರ ಬಗ್ಗೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ‌ಚಲುವರಾಜು ಆಗ್ರಹಿಸಿದ್ದಾರೆ.