ಮೈಸೂರು: ಪತ್ನಿ ಇದ್ದರೂ ಪಾಪಿಯೊಬ್ಬ ಮತ್ತೊಬ್ಬಳೊಂದಿಗೆ ಪ್ರೀತಿಯ ನಾಟಕವಾಡಿ ವಿವಾಹವಾಗಿ,ಆಕೆಯನ್ನು ಗರ್ಭಿಣಿ ಮಾಡಿದ್ದಲ್ಲದೆ ಆಕೆಯಿಂದ ಲಕ್ಷಾಂತರ ರೂ ದೋಚಿರುವ ಹೇಯ ಪ್ರಕರಣ ನಗರದಲ್ಲಿ ನಡೆದಿದೆ.
ಮೊದಲನೇ ಹೆಂಡತಿ ಜೊತೆ ಸಂಸಾರ ನಡೆಸುತ್ತಿದ್ದರೂ ಲೇಡೀಸ್ ಪಿಜಿ ಮಾಲೀಕಳ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಂಡ ವಂಚಕ ಆಕೆಯನ್ನ ಗರ್ಭಿಣಿ ಮಾಡಿ ಸುಮಾರು 9 ಲಕ್ಷ ಹಣ ವಂಚಿಸಿದ್ದಾನೆ.
ಈ ಘಟನೆ ಮೈಸೂರಿನ ವಿವಿ ಮೊಹಲ್ಲಾದಲ್ಲಿ ಬೆಳಕಿಗೆ ಬಂದಿದೆ.ಈ ಬಗ್ಗೆ ವಂಚನೆಗೆ ಇಳಗಾದ ಮಹಿಳೆ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪತಿ,ಅತ್ತೆ,ಮಾವನ ವಿರುದ್ದ ದೂರು ನೀಡಿದ್ದಾರೆ.
ಬೆಂಗಳೂರು ನಿವಾಸಿ ಭರತ್ ಗೌಡ ಹಾಗೂ ಈತನ ತಂದೆ ಸುರೇಶ್ ತಾಯಿ ಅಂಕತಲತಾ ಎಂಬುವರ ವಿರುದ್ದ ವಂಚನೆಗೆ ಒಳಗಾದ ಮಹಿಳೆ ದೂರು ದಾಖಲಿಸಿದ್ದಾರೆ.
ಗೋಕುಲಂ ನಲ್ಲಿ ಲೇಡೀಸ್ ಪಿಜಿ ನಡೆಸುತ್ತಿರುವ ಭಾಗ್ಯಲಕ್ಷ್ಮಿ ವಂಚನೆಗೆ ಒಳಗಾದವರು.
2022 ರಲ್ಲಿ ಭರತ್ ಗೌಡ(29) ಇನ್ಸ್ಟಾಗ್ರಾಂ ಮೂಲಕ ಭಾಗ್ಯಲಕ್ಷ್ಮಿಯನ್ನ ಪರಿಚಯ ಮಾಡಿಕೊಂಡಿದ್ದಾನೆ.ತನಗಿಂತ ಎರಡು ವರ್ಷ ದೊಡ್ಡವರಾದ ಭಾಗ್ಯಲಕ್ಷ್ಮಿ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಆಗುವುದಾಗಿ ತಿಳಿಸಿದ್ದಾನೆ.
ಈ ಹಿಂದೆ ಮೋನಿಕಾ ಎಂಬುವಳ ಜೊತೆ ಮದುವೆ ಆಗಿದ್ದೇನೆ ಕಾರಣಾಂತರದಿಂದ ಡೈವೋರ್ಸ್ ನೀಡಿದ್ದೇನೆ ಎಂದು ನಂಬಿಸಿದ್ದಾನೆ,ಜತೆಗೆ ಡೈವೋರ್ಸ್ ಆಗಿರುವ ಬಗ್ಗೆ ನ್ಯಾಯಾಲಯದ ತೀರ್ಪಿನ ದಾಖಲೆ ಕೊಡುವುದಾಗಿಯೂ ನಂಬಿಸಿದ್ದಾನೆ.
ಅಲ್ಲದೆ ಭರತ್ ಗೌಡ ತಂದೆ ಸುರೇಶ್,ತಾಯಿ ಅಂಕಿತ ಲತಾ ಸಹ ಸಾಥ್ ನೀಡಿ ಮೊದಲ ಪತ್ನಿಗೆ ಡೈವೋರ್ಸ್ ಆಗಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದಾರೆ.
ಈ ವಂಚಕರ ಮಾತು ನಂಬಿದ ಭಾಗ್ಯಲಕ್ಷ್ಮಿ ಮದುವೆಗೆ ಒಪ್ಪಿದ್ದಾರೆ.ಸ್ನೇಹಿತರು,
ಸಂಬಂಧಿಕರು ಹಾಗೂ ಪೋಷಕರ ಸಮ್ಮುಖದಲ್ಲಿ 2023 ರಲ್ಲಿ ಖಾಸಗಿ ಫಂಕ್ಷನ್ ಹಾಲ್ ನಲ್ಲಿ ಮದುವೆ ನಡೆದಿದೆ.
ಈ ವೇಳೆ ಬಿಸಿನೆಸ್ ಗಾಗಿ 10 ಲಕ್ಷ ಕ್ಯಾಶ್ ಹಾಗೂ 100 ಗ್ರಾಂ ಚಿನ್ನ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ್ದಾರೆ.ಮದುವೆ ನಂತರ ಕೊಡುವುದಾಗಿ ಭಾಗ್ಯಲಕ್ಷ್ಮಿ ತಂದೆ,ತಾಯಿ ಒಪ್ಪಿದ್ದಾರೆ.
ಮದುವೆ ಆದ ನಂತರ ಹಣಕ್ಕಾಗಿ ಭರತ್ ಗೌಡ ಪೀಡಿಸಿದ್ದಾನೆ.ತಂದೆ ತಾಯಿಯನ್ನ ಒಪ್ಪಿಸಿದ ಭಾಗ್ಯಲಕ್ಷ್ಮಿ 8 ಲಕ್ಷ ನೀಡಿ ಕಾರ್ ವಾಶಿಂಗ್ ಬುಸಿನೆಸ್ ಹಾಕಿಸಿಕೊಟ್ಟಿದ್ದಾರೆ.
ಅಲ್ಲದೆ ಕ್ರೆಡಿಟ್ ಕಾರ್ಡ್ ನಿಂದ ಭರತ್ ಗೌಡ 1.25 ಲಕ್ಷ ಡ್ರಾ ಮಾಡಿಕೊಂಡಿದ್ದಾನೆ.ಈ ಮಧ್ಯೆ ಮೊದಲ ಪತ್ನಿ ಮೊನಿಕಾ ಮೆಸೇಜ್ ಮಾಡಿ ಭರತ್ ಗೌಡ ಮೋಸಗಾರ ಎಂದು ಎಚ್ಚರಿಕೆ ನೀಡಿದ್ದಾರೆ.
ಆ ಮೆಸೇಜ್ ಅನ್ನ ಪತಿಗೆ ತೋರಿಸಿದಾಗ ನಮ್ಮ ಸಂಸಾರ ಹಾಳು ಮಾಡುತ್ತಿದ್ದಾಳೆ ಅವಳ ಮಾತನ್ನೆಲ್ಲ ನಂಬಬೇಡ ಎಂದು ಭರತ್ ನಂಬಿಸಿದ್ದಾನೆ.
ಕೆಲ ದಿನಗಳಲ್ಲೇ ಭರತ್ ಗೌಡನ ಎಲ್ಲಾ ವಿಷಯ ಗೊತ್ತಾಗಿದೆ.ಮೊನಿಕಾ ಜೊತೆ ನಂಟು ಉಳಿಸಿಕೊಂಡು ಡೈವೋರ್ಸ್ ನಾಟಕವಾಡಿ ತನ್ನನ್ನ ಮದುವೆಯಾಗಿರುವುದು ಭಾಗ್ಯಲಕ್ಷ್ಮಿ ಅವರಿಗೆ ಗೊತ್ತಾಗಿದೆ.
ಆಕೆ ಈ ಬಗ್ಗೆ ಪ್ರಶ್ನಿಸಿದಾಗ ನಿನ್ನ ಜೊತೆ ದೈಹಿಕ ಸಂಬಂಧ ಬೆಳೆಸಿ ಆಸ್ತಿ ಲಪಟಾಯಿಸುವ ಉದ್ದೇಶದಿಂದ ಹೀಗೆ ಮಾಡಿದೆ,ನೀನು ನನ್ನ ಏನೂ ಮಾಡಕ್ಕಾಗಲ್ಲ ಕೊಲೆ ಮಾಡಿಬಿಡುತ್ತೇನೆ ಎಂದು ಈ ವಂಚಕ ಬೆದರಿಕೆ ಹಾಕಿದ್ದಾನೆ.
ಭಾಗ್ಯಲಕ್ಷ್ಮಿ ಈಗ ಗರ್ಭಿಣಿ,ಏನೂ ಮಾಡಲು ತೋಚದೆ ಪೊಲೀಸರ ಮೊರೆ ಹೋಗಿದ್ದಾರೆ. ಭರತ್ ಗೌಡ,ಸುರೇಶ್,ಅಂಕಿತಲತಾ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸುವಂತೆ ಭಾಗ್ಯಲಕ್ಷ್ಮಿ ಜಯಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದಾರೆ.
ಅದು ಯಾವ ರೀತಿಯ ನ್ಯಾಯ ಸಿಗುವುದೊ ಕಾದು ನೋಡಬೇಕಿದೆ