ಮೈಸೂರು: ಸಿಬಿಐ ಅಧಿಕಾರಿ ಎಂದು ನಂಬಿಸಿ ನಿವೃತ್ತ ಅಧಿಕಾರಿಯೊಬ್ಬರಿಂದ 61 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ನಗರದ ಜಯಲಕ್ಷ್ಮಿಪುರಂ ನಿವಾಸಿ ಗೌರಿಶಂಕರ್ ಕೃಪಾನಿಧಿ (86) ಎಂಬುವರು ಹಣ ಕಳೆದುಕೊಂಡ ನಿವೃತ್ತ ಅಧಿಕಾರಿ.
ನಗರದ ಜಯಲಕ್ಷ್ಮಿಪುರಂ ನಿವಾಸಿ ಗೌರಿಶಂಕರ್ ಕೃಪಾನಿಧಿ (86) ಎಂಬುವರು ಹಣ ಕಳೆದುಕೊಂಡ ನಿವೃತ್ತ ಅಧಿಕಾರಿ.
ನವೆಂಬರ್ 16 ರಂದು ಗೌರಿಶಂಕರ್ ಅವರಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ನಂಬಿಸಿ ಬ್ಯಾಂಕ್ ಖಾತೆ ಮಾಹಿತಿ ಪಡೆದುಕೊಂಡಿದ್ದಾನೆ.
ನಂತರ ಹಂತ ಹಂತವಾಗಿ 61 ಲಕ್ಷ ಹಣ ಪಡೆದು ನಂತರ ಫೋನ್ ಬಂದ್ ಮಾಡಿಕೊಂಡಿದ್ದಾನೆ. ಈ ಸಂಬಂಧ ಗೌರಿಶಂಕರ್ ಕೃಪಾನಿಧಿ ಅವರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.