ಮೈಸೂರು,ಜು.2: ಅಪರಿಚಿತನೊಬ್ಬ ತಾನು ಸಿಬಿಐ ಅಧಿಕಾರಿ. ನಿಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಸಿ ಮೈಸೂರಿನ ವೈದ್ಧರೊಬ್ಬರಿಗೆ 7 ಲಕ್ಷ ಪಂಗನಾಮ ಹಾಕಿದ ಪ್ರಕರಣ ನಡೆದಿದೆ.
ಬನ್ನಿಮಂಟಪ ಲೇಔಟ್ ನಿವಾಸಿ ಡಾ.ನಜರುಲ್ಲಾ (72) ವಂಚನೆಗೆ ಒಳಗಾದವರು.
ಡಾ.ನಜರುಲ್ಲಾ ಅವರ ಫೋನ್ ಗೆ ಕರೆ ಮಾಡಿದ ವಂಚಕ ತಾನು ಸಿಬಿಐ ಅಧಿಕಾರಿ ಎಂದು ಬೆದರಿಸಿದ್ದಾನೆ.
ನಾವು ವ್ಯಕ್ತಿಯೊಬ್ಬನನ್ನ ಅರೆಸ್ಟ್ ಮಾಡಿ ಆತನ ಮೊಬೈಲ್ ಸೀಜ್ ಮಾಡಿ ಪರಿಶೀಲಿಸಿದಾಗ ಸಿಮ್ ಕಾರ್ಡ್ ನಿಮ್ಮ ಹೆಸರಲ್ಲಿದ್ದು ಮಾನವಕಳ್ಳಸಾಗಣೆ ಮಾಡುತ್ತಿರುವ ಆರೋಪ ಇದೆ ಎಂದು ಬೆದರಿಸಿದ್ದಾನೆ.
ಹಣ ಕೊಡದಿದ್ದರೆ ಬಂಧಿಸುತ್ತೇವೆ ಎಂದು ಬೆದರಿಸಿ 7 ಲಕ್ಷ ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಈ ಸಂಭಂಧ ಡಾ.ನಜರುಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.