ಸಿಬಿಐ ತೆನಿಖೆ ಎಂದು ಬೆದರಿಸಿ 42 ಲಕ್ಷ ವಂಚನೆ

Spread the love

ಮೈಸೂರು: ಖಾತೆಯಲ್ಲಿ ಕೋಟ್ಯಾಂತರ ಹಣ ಇಟ್ಟಿರುವುದಾಗಿ ಸುಳ್ಳು ಹೇಳಿ ಸಿಬಿಐ ತೆನಿಖೆ ನಡೆಯುತ್ತಿದೆ ಎಂದು ಬೆದರಿಸಿ ವ್ಯಕ್ತಿಯೊಬ್ಬರಿಗೆ 42 ಲಕ್ಷ ರೂ ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಜೆಪಿ ನಗರ ನಿವಾಸಿ ಅಮೋಘ್ (42) ಹಣ ಕಳೆದುಕೊಂಡಿದ್ದಾರೆ.

ಅಪರಿಚಿತರು ಟೆಲಿಕಾಂ ಡಿಪಾರ್ಟ್ ಮೆಂಟ್ ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಆಧಾರ್ ಕಾರ್ಡ್ ಮೂಲಕ ಸಿಮ್ ಖರೀದಿಯಾಗಿದ್ದು ಅದರಿಂದ ಕೆನರಾ ಬ್ಯಾಂಕ್ ಖಾತೆ ತೆರೆದು ಕೋಟ್ಯಾಂತರ ಹಣ ಇಟ್ಟಿರುವುದಾಗಿ ಅಮೋಘ್ ಗೆ ವಂಚಕರು ನಂಬಿಸಿದ್ದಾರೆ.

ಈ ಕುರಿತಂತೆ ಸಿಬಿಐ ತೆನಿಖೆ ನಡೆಯುತ್ತಿದೆ ಎಂದು ಬೆದರಿಸಿ ಅಮೋಘ್ ರವರ ಆಧಾರ್ ಕಾರ್ಡ್ ನಂ ಹಾಗೂ ಬ್ಯಾಂಕ್ ಖಾತೆಯ ವಿವರ ಪಡೆದು 42 ಲಕ್ಷ ವಂಚಿಸಿದ್ದಾರೆ.

ಮೋಸ ಹೋಗಿರುವುದು ಗೊತ್ತಾಗಿ ಅಮೋಘ್ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.