ತಿರುಪತಿ (ಆಂಧ್ರಪ್ರದೇಶ):ತಿರುಪತಿಯಲ್ಲಿ ಇಂದು ಘೋರ ದುರಂತವೊಂದು ಸಂಭವಿಸಿದ್ದು ನಾಲ್ವರು ಭಕ್ತರು ಸಾವನ್ನಪ್ಪಿದ್ದಾರೆ.
ಜನವರಿ 10 ರಂದು ವೈಕುಂಠ ಏಕಾದಶಿ ಇದೆ.ಹಾಗಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಈಗಿನಿಂದಲೇ ಟಿಕೆಟ್ ಕೊಳ್ಳಲು ಸಾವಿರಾರು ಭಕ್ತರು ಸೇರಿದ್ದಾರೆ.
ವೈಕುಂಠದ್ವಾರ ಸರ್ವದರ್ಶನದ ಟೋಕನ್ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಎರಡು ಸ್ಥಳಗಳಲ್ಲಿ ನಡೆದ ಕಾಲ್ತುಳಿತದಲ್ಲಿ ನಾಲ್ವರು ಭಕ್ತರು ಮೃತಪಟ್ಟಿದ್ದಾರೆ
25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಸರ್ವದರ್ಶನ ಟಿಕೆಟ್ಗಾಗಿ ಭಕ್ತರು ವಿತರಣಾ ಕೇಂದ್ರಗಳತ್ತ ಒಮ್ಮೆಲೇ ನುಗ್ಗಿ ಕಾರಣ ಕಾಲ್ತುಳಿತ ಉಂಟಾಗಿದೆ.
ಈ ವೇಳೆ ಹಲವು ಭಕ್ತರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ,ನೂಕುನುಗ್ಗಲಲ್ಲಿ ಉಸಿರುಗಟ್ಟಿ ಇಬ್ಬರು,ಮತ್ತಿಬ್ಬರು ತೀವ್ರಗಾಯಗೊಂಡು ಮೃತಪಟ್ಟಿದ್ದಾರೆ.ಮೃತ ರಲ್ಲಿ ತಮಿಳುನಾಡಿನ ಸೇಲಂ ಮೂಲದ ಮಹಿಳೆ ಕೂಡ ಒಬ್ಬರು ಎಂದು ಗುರುತಿಸಲಾಗಿದೆ.
ವೈಕುಂಠ ಏಕಾದಶಿ ನಿಮಿತ್ತ ಗುರುವಾರ ಬೆಳಗ್ಗೆ 5 ಗಂಟೆಯಿಂದ ವೈಕುಂಠ ದ್ವಾರ ಸರ್ವದರ್ಶನಕ್ಕೆ ಟಿಕೆಟ್ ನೀಡಲಾಗುವುದು ಎಂದು ಟಿಟಿಡಿ ಪ್ರಕಟಿಸಿತ್ತು.
ಭಕ್ತ ಸಾಗರವೇ ಹರಿದು ಬಂದಿದೆ. ಭಕ್ತರು ಟಿಕೆಟ್ಗಾಗಿ ಕಾದು ಕುಳಿತಿದ್ದರು. ಹೆಚ್ಚಿನ ಭಕ್ತರ ಹಿನ್ನೆಲೆಯಲ್ಲಿ ಟಿಟಿಡಿ ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ ಇಂದೇ ಟಿಕೆಟ್ ನೀಡಲು ಕೌಂಟರ್ ತೆರೆದಿದೆ.
ಆಗ ಭಕ್ತರು ಟಿಕೆಟ್ ಪಡೆದುಕೊಳ್ಳಲು ಏಕಾಏಕಿ ಕೌಂಟರ್ಗಳತ್ತ ನುಗ್ಗಿ ಬಂದಿದ್ದಾರೆ. ಈ ವೇಳೆ ಭಾರೀ ಕಾಲ್ತುಳಿತ ಉಂಟಾಗಿದೆ,ಹಾಗಾಗಿ ದುರಂತ ಸಂಭವಿಸಿದೆ.