ಮೈಸೂರು: 60 ವಯೋಮಿತಿ ದಾಟಿದ ನಂತರ ವರ್ಷಕ್ಕೆ 3 ಬಾರಿಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು
ಎಂದು ನಗರ ಪಾಲಿಕೆ ಮಾಜಿ ಸದಸ್ಯ ಮ ವಿ ರಾಮಪ್ರಸಾದ್ ಸಲಹೆ ನೀಡಿದರು.
ಒಂದು ವೇಳೆ ಆರೋಗ್ಯ ಸಮಸ್ಯೆ ಎದುರಾದರೇ ಆಯುಷ್ಮಾನ್ ಭಾರತ ಯೋಜನೆ ಅಡಿ ಬಿಪಿಎಲ್ ಕುಟುಂಬಕ್ಕೆ 5 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಇದರ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು
ನಗರದ ವಿದ್ಯಾರಣ್ಯಪುರಂ ನಲ್ಲಿರುವ ಸ್ನೇಕ್ ಪಾರ್ಕ್ ನಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮ ವಿ ರಾಮಪ್ರಸಾದ್ ಸ್ನೇಹ ಬಳಗ ಮತ್ತು ಜನಮನ ವೇದಿಕೆ ಹಾಗೂ ಕಂಪಾನಿಯೋ ಸಹಭಾಗಿತ್ವದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿರಿಯ ನಾಗರಿಕರನ್ನು ಗೌರವಿಸುವುದು ಬಹಳ ಮುಖ್ಯವಾಗಿದೆ,ಹಿರಿಯ ನಾಗರಿಕರ ಆರೋಗ್ಯದ ಕಾಳಜಿ ಅಗತ್ಯ ಎಂದು ರಾಮಪ್ರಸಾದ್ ಹೇಳಿದರು.
ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವು ಇಂದಿನಿಂದ 15 ದಿನಗಳ ಕಾಲ ವಿದ್ಯಾರಣ್ಯಪುರಂ ನಲ್ಲಿರುವ
ಸ್ನೇಕ್ ಪಾರ್ಕ್ ನಲ್ಲಿ ನಾಗರಿಕರಿಗೆ ಉಚಿತವಾಗಿ ಇರುತ್ತದೆ ಇದರ ಸದುಪಯೋಗವನ್ನು ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ವೈದ್ಯರಾದ ಶಿವರಾಜ್ ಗೌಡ, ಚಂದನ, ಶಿವಲಿಂಗ ಸ್ವಾಮಿ, ಮಂಜುನಾಥ್, ನಿರಂಜನ್, ಪ್ರಸಾದ್, ಸೋಮೇಶ್, ಚಂದ್ರಶೇಖರ್,ಲಕ್ಷ್ಮಿ ನಾರಾಯಣ್, ಮಹೇಶ್, ಶಿವು ಮತ್ತಿತರರು ಹಾಜರಿದ್ದರು.