ಮೈಸೂರು: ಐತಿಹಾಸಿಕ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ದಸರಾ ಆಹಾರ ಮೇಳ ಪ್ರಾರಂಭವಾಗಿದ್ದು ಮೇಳದಲ್ಲಿ ಅಕ್ಟೋಬರ್ 8, 9, 10 ರಂದು
ಮಹಾರಾಜ ಕಾಲೇಜು ಮೈದಾನದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಆಹಾರ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿದೆ.
ಇದೇ ಗುರುವಾರವಷ್ಟೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಮೇಳಕ್ಕೆ ಚಾಲನೆ ನೀಡಿದ್ದು,ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಆಹಾರಮೇಳ ಉಪ ಸಮಿತಿ ವತಿಯಿಂದ ಆಹರ ಸ್ಪರ್ಧೆ ಆಯೋಜಿಸಲಾಗಿದೆ.
ಅಕ್ಟೋಬರ್ 8ರಂದು ವೆಜ್ ಬಿರಿಯಾನಿ ಅವರೆಕಾಳು ಉಪ್ಪಿಟ್ಟು, ರಾಗಿ ಮುದ್ದೆ ನಾಟಿ ಕೋಳಿ ಸಾರು, 9ರಂದು ಟೊಮೆಟೊ ಬಾತ್, ಉಪ್ಪು ಸಾರು ಮುದ್ದೆ, ಮಟನ್ ಪಲಾವ್,10 ರಂದು ಹೋಳಿಗೆ, ರಾಗಿ ರೊಟ್ಟಿ ಹುಚ್ಚಳ್ಳು ಚಟ್ನಿ,ಚಿಕನ್ ಪಲಾವ್ ತಯಾರಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಸ್ಪರ್ಧೆಗೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ತಾವುಗಳೇ ತರಬೇಕೆಂದು ತಿಳಿಸಲಾಗಿದೆ ಮತ್ತು ಹನ್ನೆರಡು ಗಂಟೆ ಒಳಗೆ ತಮ್ಮ ಹೆಸರು ತಿಳಿಸಿದ್ದಾರೆ
ಮೂರೂ ದಿನವೂ ಮಧ್ಯಾಹ್ನ 12 ರಿಂದ 2ರವರೆಗೂ ಆಹಾರ ತಯಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು,
ಸ್ಥಳದಲ್ಲೇ 12 ಗಂಟೆಯೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಆಹಾರಮೇಳ ಉಪ ಸಮಿತಿ ಅಧ್ಯಕ್ಷ ಜಿ ಶ್ರೀನಾಥ್ ಬಾಬು ತಿಳಿಸಿದ್ದಾರೆ.