ಮೈಸೂರು: ಮಹಾತ್ಮ ಗಾಂಧೀಜಿಯವರ ಜನ್ಮದಿನವು ಭಾರತದಲ್ಲಿ ರಾಷ್ಟ್ರೀಯ ಹಬ್ಬವಾಗಿದ್ದು, ಅವರ ತತ್ವ ಮತ್ತು ಆದರ್ಶಗಳು ಸರ್ವಕಾಲಿಕವಾದದ್ದು ಎಂದು ಆಂಗ್ಲ ಭಾಷೆಯ ಉಪನ್ಯಾಸಕರಾದ ರಂಗಸ್ವಾಮಿ ಅವರು ಹೇಳಿದರು.
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಪ್ರತೀ ವರ್ಷ ಸಾರ್ವಜನಿಕರಿಗೆ ಸ್ಮರಣೀಯ ದಿನವಾಗಿದೆ. ಈ ದಿನ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಗಾಂಧಿಯವರ ಕೊಡುಗೆಯನ್ನು ಗೌರವಿಸುವುದು ಮುಖ್ಯ ಉದ್ದೇಶವಾಗಿದೆ ಅಹಿಂಸೆ ಮತ್ತು ಸತ್ಯದ ಕುರಿತು ಅವರು ನೀಡಿರುವ ಪಾಠ ಈ ದಿನದ ಪ್ರಮುಖ ಸಂದೇಶವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಮಾತನಾಡಿ,ಮಕ್ಕಳಿಗೆ ಗಾಂಧೀಜಿಯವರ ಜೀವನ, ತತ್ವ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ನೀಡಬೇಕು,ಅವರು ಉಡುಗೊರೆಯಾಗಿ ನೀಡಿರುವ ಅಹಿಂಸೆ, ಸತ್ಯ ಮತ್ತು ಶ್ರದ್ಧೆಯ ಮಾರ್ಗವನ್ನು ಅನುಸರಿಸಿ, ಸಮಾನ ಮತ್ತು ಶಾಂತಿಯುತ ಸಮಾಜ ಕಟ್ಟುವ ಬದ್ಧತೆಯನ್ನು ಈ ದಿನ ಪುನರಾವರ್ತಿಸೋಣ ಎಂದು ಕರೆ ನೀಡಿದರು.
ಅವರ ಕನಸು, ಆಶಯ ನಮ್ಮ ದೇಶದ ಪ್ರಗತಿಗೆ ದಾರಿ ತೋರಲಿ. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕ ಗಾಂಧೀಜಿಯವರ ಸಿದ್ಧಾಂತಗಳನ್ನು ಜೀವನದಲ್ಲಿ ಪಾಲನೆ ಮಾಡುವ ಮೂಲಕ ಅವರ ಅಭಿಪ್ರಾಯಕ್ಕೆ ಸ್ಮರಣೆಯ ಗೌರವ ಸಲ್ಲಿಸೋಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸರ್ವಧರ್ಮ ಪಠಣವನ್ನು ಎಂ.ಬಿ ಪದ್ಮಾವತಿ ಮತ್ತು ಆದಿಲ್ ಹುಸೇನ್ ನುಡಿದರು. ಗಾಂಧೀಜಿ ಅವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ್ ಹಾಡನ್ನು ಹೇಳಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ಹೆಚ್ಚ್.ಕೆ. ಪ್ರಕಾಶ್,ಎನ್ ನಾಗರಾಜ್ , ಡಾ. ಎ.ಸುಮ,ದಿನೇಶ್, ಹರೀಶ್ ಅಂಬಿಕಾ, ವತ್ಸಲ, ಸುಮಿತ್ರ ,ಸುಲೋಚನ ಮಹದೇವ ಸ್ವಾಮಿ, ನಿಂಗಯ್ಯ ಉಪಸ್ಥಿತರಿದ್ದರು.