ಮೈಸೂರು: ಮೈಸೂರಿನ ಸುಂಧರ ಅರಮನೆಯಲ್ಲಿ ಮಾಗಿ ಉತ್ಸವ ಆರಂಭವಾಗಲಿದೆ.
ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆಯ ಆವರಣದಲ್ಲಿ 11 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಇಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ಚಾಲನೆ ನೀಡಲಿದ್ದಾರೆ.

ಹಲವು ವೈಶಿಷ್ಟಗಳೊಂದಿಗೆ ಆಯೋಜಿಸಲಾಗಿರುವ ಮಾಗಿ ಉತ್ಸವದಲ್ಲಿ 25,000 ಹೂವಿನ ಕುಂಡಗಳಲ್ಲಿ ಮೇರಿ ಗೋಲ್ಡ್, ಸಾಲ್ವಿಯ, ಡೇಲಿಯ, ಕೋಲಿಯಸ್, ಸೇವಂತಿಗೆ, ಪಿಟೋನಿಯ ಸಿಲೋಶಿಯ, ಜಿರೇನಿಯಂ, ಕಾಶಿಗೊಂಡೆ ಸೇರಿದಂತೆ 35ಕ್ಕೂ ಹೆಚ್ಚು ವಿವಿಧ ಬಗೆಯ ಹೂವಿನ ಗಿಡಗಳನ್ನು ಬೆಳೆಸಿ ಜೋಡಿಸಲಾಗಿದೆ.

ಅಲಂಕಾರಿಕ ಹೂಗಳಿಂದ ವಿವಿಧ ಆಕೃತಿಗಳನ್ನು ಸಿದ್ಧಗೊಳಿಸಲಾಗಿದೆ.
ಸಾವಿರಾರು ಹೂಗಳಿಂದ ಅಕ್ಷರಧಾಮ ಮಾದರಿಯನ್ನು ಸಿದ್ಧಪಡಿಸಲಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಆಕೃತಿ, ನಂಜುಂಡೇಶ್ವರ ದೇವಾಲಯ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಮಾದರಿಯ ಆಕೃತಿಗಳು, ಆನೆ, ಆಮೆ, ರಾಜವಂಶದ ಲಾಂಛನ ಗಂಡಭೇರುಂಡ ಸೇರಿದಂತೆ ಇನ್ನೂ ಹಲವು ಮಾದರಿಗಳನ್ನು ಹೂಗಳಿಂದ ಸಿದ್ಧಪಡಿಸಲಾಗಿದೆಲ್ದು ಮನಸಳೆಯುತ್ತಿವೆ.

ಈ ಫಲಪುಷ್ಪ ಪ್ರದರ್ಶನದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಶುಲ್ಕವನ್ನು ನಿಗಧಿ ಗೊಳಿಸಲಾಗಿದ್ದು ಭಾರತೀಯ ಹಾಗೂ ವಿದೇಶ ವಯಸ್ಕರಿಗೆ 30 ರೂ., 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ, ಹತ್ತರಿಂದ ಹದಿನಾರು ವರ್ಷದ ಮಕ್ಕಳಿಗೆ ರೂ. 10 ಪ್ರವೇಶ ದರವನ್ನು ನಿಗಧಿಗೊಳಿಸಲಾಗಿದೆ.